ಗಂಡಿನ ತಂಬಾಕು ಚಟ ಬಿಡಿಸಲು ಹೆಣ್ಣಿಗೆ ಹಠ ಇದ್ದರೆ ಪರವಾಗಿಲ್ಲ; ಪಾಟೀಲ

0
35

ಶಹಾಬಾದ: ಹೆಣ್ಣಿಗೆ ಹಠ ಇರಬಾರದು, ಗಂಡಿಗೆ ಚಟ ಇರಬಾರದು ಎನ್ನುವ ಹಾಗೇ ಗಂಡಿನ ತಂಬಾಕು ಚಟ ಬಿಡಿಸಲು ಹೆಣ್ಣಿಗೆ ಹಠ ಇದ್ದರೆ ಪರವಾಗಿಲ್ಲ ಎಂದು ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ.ಜಿ.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ ಹಳೆಶಹಾಬಾದನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಲಾದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದೀರ್ಘವಾದ ಅಡ್ಡ ಪರಿಣಾಮಗಳಾಗುತ್ತವೆ. ಹಾಗಾಗಿ ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಅವರು ಹಳೆಶಹಾಬಾದನಸಮಾರಂಭದಲ್ಲಿ ಅವರು ಮಾತನಾಡಿದರು. ನಿರಂತರ ತಂಬಾಕು ಸೇವನೆಯಿಂದ ಹೃದಯಾಘಾತ, ಪಾಶ್ರ್ವವಾಯು, ಕ್ಯಾನ್ಸರ್‍ನಂತಹ ರೋಗಗಳು ಬರುತ್ತವೆ. ಧೂಮಪಾನ ಮಾಡುವವರಿಂದ ಅವರ ಸುತ್ತಮುತ್ತ ಇರುವ ವ್ಯಕ್ತಿಗಳಿಗೂ ಅದರ ಪರಿಣಾಮ ಉಂಟಾಗುತ್ತವೆ ಎಂದರು.ಸಮಾಜದಲ್ಲಿ ಎಲ್ಲರೂ ಉತ್ತಮ ಜೀವನ ನಡೆಸಬೇಕು. ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಚಿತ್ತಾಪೂರ ಯೋಜನಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಪ್ರತಿ ವರ್ಷ ಮೇ 31 ರಂದು ಮಾತ್ರ ತಂಬಾಕು ರಹಿತ ದಿನ ಆಚರಿಸದೆ, ವರ್ಷದ ಎಲ್ಲಾ ದಿನ ಗಳಂದು ಈ ದಿನವನ್ನು ಆಚರಿಸಿದಲ್ಲಿ ಸದೃಢ ಹಾಗೂ ಆರೋಗ್ಯಯುತ ಸಮಾಜ ವನ್ನು ನಿರ್ಮಾಣ ಮಾಡಲು ಸಾಧ್ಯ. ಎಲ್ಲಾ ವಯಸ್ಸಿನ ವ್ಯಕ್ತಿಗಳು ನಾನು ಇಂದಿನಿಂದ ಯಾವುದೇ ತಂಬಾಕು ಉತ್ಪನ್ನಗಳನ್ನು ಸೇವಿಸುವುದಿಲ್ಲವೆಂಬ ಪ್ರತಿಜ್ಞೆ ಕೈಗೊಂಡಲ್ಲಿ ಮಾತ್ರ ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸ ಬಹುದು ಎಂದರು.

ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ, ಧೂಮಪಾನ ಮಾಡುವವರ ಮನವೊಲಿಸಲು ತಂಬಾಕು ವ್ಯಸನ ಮುಕ್ತ ಕೇಂದ್ರಗಳನ್ನು ಸ್ಥಾಪಿಸಿ ತನ್ಮೂಲಕ ಅವರಿಗೆ ತರಬೇತಿ ಕೊಡು ವಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ನಾವೆಲ್ಲರೂ ತಂಬಾಕು ರಹಿತ ಮನೆ, ಸಮಾಜ ಹಾಗೂ ಸಮುದಾಯವನ್ನು ನಿರ್ಮಾಣ ಮಾಡೋಣ. ನಾನು ತಂಬಾಕು ಬಳಕೆ ಮಾಡುವುದಿಲ್ಲ, ಬೇರೆಯವರಿಗೂ ಬಳಕೆ ಮಾಡಲು ಬಿಡುವುದಿಲ್ಲವೆಂಬ ಒಗ್ಗಟ್ಟಿನ ಮಂತ್ರವನ್ನು ಜಪಿಸೋಣ ಎಂದರು. ಸಂಸ್ಥೆಯ ಮೇಲ್ವಚಾರಕಿ ಜಯಶ್ರೀ, ಸಂಗಮ್ಮ, ಅಧಿಕಾರಿ ಫಕಿರೇಶ, ಉಮೇಶ ಗುತ್ತೆದಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here