ಶರಣ ಸಂಸ್ಥಾನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಶ್ಲಾಘನೀಯ : ಡಾ.ಶಂಕರ ಬಿದರಿ

0
100

ಕಲಬುರಗಿ: ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಹೆಚ್ಚಿನ ಮಟ್ಟದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ನಿವೃತ್ತ ಪೋಲಿಸ್ ಮಹಾನಿರ್ದೇಶಕರಾದ ಡಾ.ಶಂಕರ ಬಿದರಿಯವರು ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡ ಕಲಾವಾಣಿ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಈ ಸಂಸ್ಥೆಯಲ್ಲಿ ಅಧಿಕ ಮಟ್ಟದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಸಂತೋಷದ ಸಂಗತಿ. ಪೂಜ್ಯ ಡಾ.ಶರಣಬಸವಪ್ಪ ಅಪ್ಪಾ ಅವರು ಬಹು ದೊಡ್ಡ ಕೆಲಸ ಮಾಡುತ್ತಿದ್ದಾರೆ. ಹೆಣ್ಣಮಕ್ಕಳು ಶಿಕ್ಷಣ ಪಡೆಯುವುದು ಅಗತ್ಯವಿದೆ. ಅವರ ಶಿಕ್ಷಣದಿಂದ ಇಡೀ ಕುಟುಂಬ ಶಿಕ್ಷಿತವಾಗುತ್ತದಲ್ಲದೆ ರಾಜ್ಯದ, ದೇಶದ ಅಭಿವೃದ್ಧಿಯಾಗುತ್ತದೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಅವಕಾಶಗಳು ಬಂದಾಗ ಅವಳನ್ನು ಬಳಸಿಕೊಂಡು ಬೆಳೆಯಬೇಕು ಅವಕಾಶಗಳನ್ನು ಕೈ ಚೆಲ್ಲಬೇಡಿ ಅದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ಓದುವುದರ ಜತೆಗೆ ಉತ್ತಮ ಸಂಗೀತ ಆಲಿಸುವುದು ಮುಖ್ಯ. ಮನಸ್ಸನ್ನು ಮುದಗೊಳಿಸಿ, ಹಗುರಗೊಳಿಸುವ ಶಕ್ತಿ ಸಂಗೀತಕ್ಕಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಮಾತನಾಡುತ್ತಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮೊದಲಿನಿಂದಲೂ ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀಯವರು ಸಹ ಮಹಿಳೆಯರ ಶಿಕ್ಷಣಕ್ಕೆ ಮತ್ತು ಅವರ ಸಬಲೀಕರಣಕ್ಕೆ ಮಹತ್ವ ನೀಡಿದ್ದಾರೆ. ಈಗ ಪುರುಷ ಮತ್ತು ಮಹಿಳೆ ಎನ್ನುವ ಭೇದ ಇಲ್ಲ, ಎಲ್ಲಾ ವಿಭಾಗಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾಳೆ. ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬೇಕೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಅತಿಥಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ಶಿವಾನಂದ ದೇವರ ಮಾತನಾಡಿ, ಈ ಭಾಗದ ಹೆಣ್ಣಮಕ್ಕಳಲ್ಲಿ ಉತ್ತಮವಾದ ಸಾಮರ್ಥ್ಯ ಇದೆ ಆದರೆ ಅದನ್ನು ಹೊರಗೆ ಹಾಕಬೇಕೆಂದು ಕಿವಿ ಮಾತು ಹೇಳಿದರು. ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘವು ಗುಣಾತ್ಮಕ ಶಿಕ್ಷಣಕ್ಕೆ ಮೊದಲಿನಿಂದಲೂ ಆದ್ಯತೆ ನೀಡುತ್ತಾ ಬಂದಿದೆ. ಇಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಪೂಜ್ಯ ದೊಡ್ಡಪ್ಪ ಅಪ್ಪಾಜೀಯವರು ಹೆಣ್ಣುಮಕ್ಕಳ ಶಿಕ್ಷಣ ಮೊದಲು ಆರಂಭಿಸಿದ್ದು, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜೀಯವರು ಹೆಣ್ಣು ಮಕ್ಕಳಿಗಾಗಿ ಇಂಜಿನಿಯರಿಂಗ್ ಕಾಲೇಜು ಅಲ್ಲದೆ ಅನೇಕ ಬೇರೆ ಬೇರೆ ಕೋರ್ಸುಗಳನ್ನು ಆರಂಭಿಸಿ ಸ್ವಾವಲಂಬಿಯಾಗಿ ಬದುಕುವ ಕಲೆ ತೋರಿಸಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗೂ ಹೆಣ್ಣುಮಕ್ಕಳು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ವೇದಿಕೆ ಮೇಲೆ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ. ಜಾನಕಿ ಹೊಸೂರ, ಸಹ ಸಲಹೆಗಾರರಾದ ಡಾ.ಸೀಮಾ ಪಾಟೀಲ, ಪ್ರೊ. ಶಾಂತಲಾ ನಿಷ್ಠಿ, ಪ್ರೊ. ಸಾವಿತ್ರಿ ಜಂಬಲದಿನ್ನಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇದ್ದರು.

ಕಾರ್ಯಕ್ರಮದಲ್ಲಿ ಮುಕ್ತಾಂಬಿಕಾ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಆರ್.ಹುಗ್ಗಿ, ಡಾ.ಸಿದ್ದಮ್ಮ ಗುಡೇದ್, ಡಾ.ಇಂದಿರಾ ಶೆಟಕಾರ, ಡಾ. ಪುಟ್ಟಮಣಿ ದೇವಿದಾಸ, ಡಾ.ಎನ್.ಹೂಗಾರ, ಈರಣ್ಣ ಸ್ವಾದಿ, ಸಿದ್ದು ಪಾಟೀಲ, ಕೃಪಾಸಾಗರ ಗೊಬ್ಬುರ, ದೀಶಾ ಮೆಹತಾ, ಅನಿತಾ ಗೊಬ್ಬುರ, ಪದ್ಮಜ ಹೆಚ್. ವಿದ್ಯಾ ರೇಶ್ಮಿ, ಅನುಸೂಯ ಬಡಿಗೇರ, ಪ್ರಭಾವತಿ, ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಪರುತಯ್ಯ ಹಿರೇಮಠ ಮತ್ತು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕು. ರೂಪಾಲಿ ಶರ್ಮಾ ಸ್ವಾಗತಿಸಿದರು. ಕು.ರೋಹಿಣಿ ಬಿ.ಕೆ. ವಂದಿಸಿದರು. ಕು. ಐಶ್ವರ್ಯ ವಿ. ಮತ್ತು ಕು. ಭಾಗ್ಯಶ್ರೀ ಆರ್ ನಿರೂಪಿಸಿದರು. ಪ್ರೊ. ರೇವಯ್ಯ ವಸ್ತ್ರದಮಠ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here