ಕಲಬುರಗಿ: ಬಿದ್ದಾಪೂರ ಕಾಲೋನಿ ಮಲ್ಲಿಕಾರ್ಜುನ ಧುತ್ತರಗಾಂವ ಅವರ ಮನೆಯಲ್ಲಿ ವಚನೋತ್ಸವ ಪ್ರತಿಷ್ಠಾನ ಹಾಗೂ ವಚನೋತ್ಸವ ಸಮಿತಿಗಳ ಒಕ್ಕೂಟದ ವತಿಯಿಂದ ಶ್ರಾವಣ ಮಾಸದಲ್ಲಿ ವಚನಗಳಲ್ಲಿ ಜೀವನದ ಮೌಲ್ಯಗಳು ಎಂಬ ಉಪನ್ಯಾಸ ಮಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ರವರು ಅಧ್ಯಕ್ಷೆತೆ ವಹಿಸಿ ಮಾತನಾಡಿದರು.
ಯುಗ-ಯುಗಗಳಿಂದ ಬಂದ ಪದ್ಧತಿ, ಪರಂಪರೆಗಳೆಂದು ಅವೆಲ್ಲ ಧರ್ಮ, ನೀತಿಗಳೆಂದು ಸಂಪ್ರದಾಯಕ್ಕೆ ವಿದೇಕವಾಗಿ ನಡೆದುಕೊಳ್ಳದಿದ್ದರೆ ಧರ್ಮ ದ್ರೋಹವಾಗುತ್ತದೆ. ನರಕ ಪ್ರಾಪ್ತಿಯಾಗುತ್ತದೆಂದಲ್ಲ ಹೆದರಿಸಿ ತಾವು ಹೇಳಿದ್ದೆ ಧರ್ಮವೆಂದು ಜನ ಒಪ್ಪಿಕೊಳ್ಳುವಂತೆ ಮಾಡಿದ ಪಟ್ಟಭದ್ರ ಹಿತಾಸಕ್ತಿಗಳ ಮುಚ್ಚಿಕೊಂಡಿದ್ದ ಬಾಗಿಲನ್ನು ತೆರೆದು ಮೌಢ್ಯ ಆಚರಣೆಯ ಸತ್ಯವನ್ನು ಬಯಲಿಗೆ ತಂದ ಅಪೂರ್ವ ಪ್ರಯೋಗ ಅಥವಾ ಕೀರ್ತಿ ವಚನ ಸಾಹಿತ್ಯಕ್ಕೆ ಸಲ್ಲುತ್ತದೆಂದು ನೀರಕಂಡಲ್ಲಿ ಮುಳುಗುವರಯ್ಯ ಎಂಬ ವಚನ ವಿಶ್ಲೇಷಣೆಯೊಂದಿಗೆ ಕಾರ್ಯಕ್ರಮಕ್ಕೆ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ.ಮಲ್ಲಿಕಾರ್ಜುನ ವಡ್ಡಣಕೇರಿ ಉಪನ್ಯಾಸ ಮಾಡಿದರು.
ವಚನೋತ್ಸವ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಬಸವರಾಜ ಮೋದಿ, ಉಪಾಧ್ಯಕ್ಷರಾದಿ ಎಂ.ಬಿ.ಸಿಪಾಯಿ, ಕಾರ್ಯಕ್ರಮದ ದಾಸೋಹಿಗಳಾದ ಮಲ್ಲಿಕಾರ್ಜುನ ಧುತ್ತರಗಾಂವ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಲ್ಯಾಣಪ್ಪಾ ಬಿರಾದಾರ ಓಂಕಾರ ಪಠಿಸಿದರು. ವಿಶ್ವನಾಥ ಮಂಗಲಗಿ ಶರಣ ಗೀತೆ ಹಾಡಿದರು, ಮಲ್ಲಿಕಾರ್ಜುನ ಧುತ್ತರಗಾಂವ ಸ್ವಾಗತಿಸಿದರು, ಮಲ್ಲಣ್ಣ ನಾಗರಾಳ ಪ್ರಸ್ತಾವಿಕ ಮಾತನಾಡಿದರು, ಬಸವರಾಜ ಧೂಳಾಗುಂಡಿ ನಿರೂಪಿಸಿದರು, ವಿನೋದಕುಮಾರ ಜನೆವರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಚನ್ನಬಸಪ್ಪ ನನದಿ, ಎಸ್.ಜಿ.ಹೆಬ್ಬಾಳೆ, ಪ್ರಭಾಕರ ಹೂಗಾರ, ಶಿವರಾಜ ಅಂದಾನಿ, ವಿಶ್ವನಾಥ ಬಿರಾದಾರ, ಎನ್.ಎಸ್.ಬಾಬಳಗಿ, ಬಿ.ಬಿ.ಹಿರೇಮಠ, ಕಲ್ಯಾಣಿ ನಾಗೋಜಿ, ಈರಣ್ಣ ಪಾಟೀಲ, ಸಿ.ಟಿ.ಗೊಬ್ಬರಕರ, ಪರಮೇಶ್ವರ ಪಾಟೀಲ, ಯಶವಂತಗೌಡ ಪಾಟೀಲ, ವಿಜಯಲಕ್ಷ್ಮೀ ಧುತ್ತರಗಾಂವ, ರಾಜೇಶ್ವರಿ ವಡ್ಡಳ್ಳಿ, ಶಿವಾಜಿ, ಶಿವಶಾಂತ, ಸೂರ್ಯಕಾಂತ ಬೆಳಮಗಿ, ಸಿದ್ದು ಸಾಲಿಮನಿ, ವಿದ್ಯಾಧರ ಮಂಗಳೂರೆ, ಬಾಬುರಾವ ಜಾಧವ ಹಾಗೂ ಇತರರು ಉಪಸ್ಥಿತರಿದ್ದರು.