ನೂತನ ಸಚಿವ ಹಾಗೂ ಶಾಸಕರಿಗೆ ಸನ್ಮಾನ

0
32

ಕಲಬುರಗಿ: ಈಶ್ವರ ನಗರ (ಗಾಬರೇ ಲೇಔಟ್) ಬಡಾವಣೆಯ ಅಭಿವೃದ್ದಿ ಸಂಘದ ವತಿಯಿಂದ ನೂತನವಾಗಿ ಅಧಿಕಾರ ವಹಿಸಿಕೊಂಡ ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ದಿಮೇಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹಾಗೂ ನೂತನವಾಗಿ ದಕ್ಷಿಣ ಮತ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರಿಗೆ ಸನ್ಮಾನಿಸಿಲಾಯಿತು.

ಸಮಾಪರಂಭದ ಅಧ್ಯಕ್ಷತೆಯನ್ನು ಶ್ರೀ ಮಹಿಪಾಲ ರೆಡ್ಡಿ ಇಟಗಿ ಅಧ್ಯಕ್ಷರು ಇವರು ವಹಿಸಿಕೊಂಡಿದ್ದರು. ಸನ್ಮಾನ ಸ್ವೀಕರಿಸಿ ಸಚಿವರು ಮಾತನಾಡುತ್ತಾ ಮನವಿ ಪತ್ರದಲ್ಲಿ ಬೇಡಿಕೆ ಇಟ್ಟಿರುವಂತೆ ಬಡಾವಣೆಯ ನಿವಾಸಿಗಳ ಅನಕೂಲಕ್ಕಾಗಿ ಒಂದು ಆರೋ ಪ್ಲಾನಂ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಕೊಡುವದಾಗಿ ತಿಳಿಸಿದರು. ಅದೇ ಪ್ರಕಾರ ಉಳಿದ ಬೇಡಿಕೆಗಳನ್ನು ಶಾಸಕರೊಡನೆ ಒಟ್ಟು ಗೂಡಿ ಪೂರೈಸುವುದಾಗಿ ಭರಸವ ನೀಡಿದರು.

Contact Your\'s Advertisement; 9902492681

ಶಾಸಕ ಅಲ್ಲಂಪ್ರಭು ಪಾಟೀಲ್ ರವರು ಮಾತನಾಡಿ ಬಡಾವಣೆಯ ನಾಗರಿಕರ ಒಗ್ಗಟ್ಟಿನ ಬಗ್ಗೆ ಹಾಗೂ ಉಧ್ಯಾನ ವನದ ಜಾಗದ ಸಂರಕ್ಷಣೆಯಲ್ಲಿ ಹಾಗೂ ಉಧ್ಯಾನ ವನದಲ್ಲಿ ಗಿಡ ಮರಗಳನ್ನು ಪೆÇೀಷಿಸಿ ಬೆಳೆಸುವಲ್ಲಿ ತೋರಿದ ಪರಿಶ್ರಮವನ್ನು ಕೊಂಡಾಡಿದರು. ಮನವಿ ಪತ್ರದಲ್ಲಿ ತಿಳಿಸಿರುವ ಎಲ್ಲಾ 09 ಬೇಡಿಕೆಗಳನ್ನು ಸ್ಥಳಿಯವಾಗಿ ಅಥವಾ ಸರಕಾರದ ಮಟ್ಟದಲ್ಲಿ ಮಂಜೂರಾತಿ ಕೊಡಿಸುವುದಾಗಿ ತಿಳಿಸಿದರು. ಅದೇ ಪ್ರಕಾರ ಸದರಿ: ಉಧ್ಯಾನವನ್ನು ಪಾಲಿಕೆವತಿಯಿಂದ ದತ್ತು ತೆಗೆದುಕೊಳ್ಳಲು ಕ್ರಮ ಜರುಗಿಸುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ನಿಂಗಮ್ಮ ಕಟ್ಟಿಮನಿ, ದಕ್ಷಿಣ ಮತ್ರ ಕ್ಷೇತ್ರದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಲಿಂಗರಾಜ ತಾರಫೈಲ್, ಗ್ರಾಮೀಣ ಬ್ಲಾಕ ಕಾಂಗ್ರೇಸ್ ಅಧ್ಯಕ್ಷ ಲಿಂಗರಾಜ ಕಣ್ಣಿ ಕಾಂಗ್ರೇಸ್ ಮುಖಂಡ ಲಾಲ ಅಹ್ಮದ ಬಾಂಬೆ ಸೇಠ ಇದ್ದರು. ಅಭಿವೃದ್ಧಿ ಸಂಘ ಅಧ್ಯಕ್ಷ ಮಹಿಪಾಲ ರೆಡ್ಡಿ ಇಟಗಿ ಇವರು ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯದರ್ಶಿ ಮಧುಕರ ಮಾಳಕರ ರವರು ಸಾಸ್ಥವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಬಿ.ಬಿ. ಬೀರಾದರ ಅವರು ಮನವಿ ಪತ್ರವನ್ನು ಓದಿ ಆದರ ಪ್ರತಿಯನ್ನು ಮಾನ್ಯ ಸಚಿವರಿಗೆ ಶಾಸಕರಿಗೆ ಹಾಗೂ ಮಹಾನಗರ ಪಾಲಿಕೆಯ ಸದಸ್ಯರಿಗೆ ಸಲ್ಲಿಸಿದರು.

ಕುಮಾರಿ ಲಕ್ಷ್ಮೀ, ರವರು ಪ್ರಾರ್ಥನಾ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು, ಸಂಘದ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಹನುಮಂತ ಪ್ರಭು ರವರು ವಂದಾನಾರ್ಪಣೆ ಮಾಡಿದರು.

ಬಡಾವಣೆಯ ಹಿರಿಯ ನಾಗರಿಕರು, ಸಂಘದ ಇತರ ಪದಾಧಿಕಾರಿಗಳು ಹಾಗೂ ಸೂತ್ತಮುತ್ತಲಿನ ಬಡಾವಣೆಯ ನಾಗರಿಕರು, ತಾಯಂದಿರು ಹಾಗೂ ಸಚಿವರ ಮತ್ತು ಶಾಸಕರ ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಸಾದ ವೆವಸ್ಥೆ ಮಾಡಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here