ಶಹಾಬಾದ: ನಗರಸಭೆ ವಾರ್ಡ ನಂ. 3 ರ ಉಪಚುನಾವಣೆ ಪ್ರಯುಕ್ತ ಗುರುವಾರ ಬೆಳಿಗ್ಗೆ ಕಲಬುರಗಿ ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮಡು ಅವರು ಬಿಜೆಪಿ ಅಭ್ಯರ್ಥಿ ಜಯಶ್ರೀ ಅರುಣ ಜಾಯಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಅಭ್ಯರ್ಥಿ ಜಯಶ್ರೀ ಅರುಣ ಜಾಯಿಯವರಿಗೆ ತಮ್ಮ ಅಮೂಲ್ಯ ಮತವನ್ನು ನೀಡುವ ಮೂಲಕ ಬಿಜೆಪಿಗೆ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈಗಾಗಲೇ ನಾನು ಶಾಸಕನಾಗಿ ಹಳೆಶಹಾಬಾದಿಗೆ ನೇಕ ಜನಪರವಾದ ಕೆಲಸಗಳನ್ನು ಮಾಡಿದ್ದೆನೆ.
ಈ ಬಗ್ಗೆ ತಮಗೆಲ್ಲರಿಗೂ ಗೊತ್ತಿದ್ದ ವಿಷಯ.ನಮ್ಮ ಅಭ್ಯರ್ಥಿಗೆ ಗೆಲ್ಲಿಸಿ ತಂದರೆ ಅನೇಕ ಅಭಿವೃದ್ಧಿ ಕೆಲಸಗಳು ಮಾಡಲು ಅನುಕೂಲವಾಗುತ್ತದೆ.ಈಗಾಗಲೇ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಏನು ಕೆಲಸವಾಗಿಲ್ಲ ಎಂಬುದು ಜನರಿಂದ ಕೇಳಿ ಬರುತ್ತಿದೆ.ಆದ್ದರಿಂದ ನಮ್ಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಹಾಬಾದ ಮಂಡಲ ಅಧ್ಯಕ್ಷರು ನಿಂಗಣ್ಣ ಹುಳಗೋಳಕರ್, ಕಲಬುರಗಿ ಗ್ರಾಮಾಂತರ ಎಸ್.ಸಿ.ಮೊರ್ಚಾ ಪ್ರಮುಖರಾದ ಬಸವರಾಜ ಬೆಣ್ಣೂರ್, ಮುಖಂಡರಾದ ಶಿವಕುಮಾರ ಇಂಗಿನಶೆಟ್ಟಿ ಹಾಗೂ ಶಹಾಬಾದ ಮಂಡಲ ಪದಾಧಿಕಾರಿಗಳು, ಪ್ರಮುಖರು, ನಗರಸಭೆ ಸದಸ್ಯರು, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು, ಮೊರ್ಚಾಗಳ, ಪ್ರಕೋಷ್ಟಗಳ ಮತ್ತು ಭೂತಿನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.