ಶಹಾಬಾದ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿಎ. ನಾರಾಯಣಗೌಡ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಆನಂದ ದೊಡ್ಡಮನಿ ಹಾಗೂ ಕರವೇ ತಾಲೂಕಾಧ್ಯಕ್ಷ ಅಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ ನೇತೃತ್ವದಲ್ಲಿ ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶಹಾಬಾದ ನಗರ ಘಟಕದ ಅಧ್ಯಕ್ಷರಾಗಿ- ಶಿವಪ್ರಸಾದ ಮಠಪತಿ, ಉಪಾಧ್ಯಕ್ಷರಾಗಿ – ಭೀಮಾಶಂಕರ ಕೊಡ್ಲಾ, ಸಹ ಕಾರ್ಯದರ್ಶಿಯಾಗಿ – ಸಂತೋಷ ಕೋರೆ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕರವೇ ತಾಲೂಕಾಧ್ಯಕ್ಷ ಅಧ್ಯಕ್ಷರಾದ ಯಲ್ಲಾಲಿಂಗ ಹೈಯ್ಯಾಳಕರ ಮಾತನಾಡಿ, ಕರವೇ ತಮಗೆ ನೀಡಿರುವ ಸ್ಥಾನಮಾನದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ.ಕನ್ನಡ ಕಟ್ಟುವ ಕೆಲಸಕ್ಕೆ ಯಾವಾಗಲೂ ಹೋರಾಟಕ್ಕೆ ಸಿದ್ಧರಾಗಬೇಕು.ಅಲ್ಲದೇ ಕನ್ನಡಕ್ಕೆ ಧಕ್ಕೆ ಬಂದಾಗ ಸಿಡಿದೇಳಲು ಹಿಂಜರಿಯಬಾರದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಮಹೇಶ್ ಕಾಂಬ್ಳೆ, ಮಹೆಬೂಬ ಮದ್ರಿ, ತಾಲೂಕ ಯುವ ಘಟಕ ಅಧ್ಯಕ್ಷರಾದ ಶಿವಕುಮಾರ ದೊರೆ ಹಾಗೂ ಸಾಗರ ಬಂದೂಕ್, ಮುನಿಯಪ್ಪ, ಮ. ಮೈನುದ್ದಿನ್, ಸಂತೋಷ, ಶಶಿಕುಮಾರ, ಸಹದೇವ್, ಸಂಜಯ್, ರವಿ ಮಂಜುನಾಥ್, ಅಬ್ಬು, ನಾಗು ಸೇರಿದಂತೆ ತಾಲೂಕಿನ ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.