ಆಗಸ್ಟ್ 21 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

0
417

ಕಲಬುರಗಿ: ವಿವಿಧ ಕಂಪನಿಗಳಲ್ಲಿನ ಹುದ್ದೆಗಳ ಭರ್ತಿಗಾಗಿ ಇದೇ ಆಗಸ್ಟ್ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ ಹೊಟೇಲ್ ಹೆರಿಟೇಜ್ ಇನ್‌ದಲ್ಲಿ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಹೆಚ್.ಆರ್.ಎಕ್ಸಿಕ್ಯೂಟಿವ್ (ಮಹಿಳೆಯರಿಗೆ ಆದ್ಯತೆ ನೀಡಲಾಗುವುದು) ಹುದ್ದೆಗಳಿಗೆ ಬಿ.ಬಿ.ಎಂ, ಎಂ.ಬಿ.ಎ. ಪಾಸಾಗಿರಬೇಕು ಹಾಗೂ ಕುಕ್, ಫ್ರಂಟ್ ಆಫೀಸ ಎಕ್ಸಿಕ್ಯೂಟಿವ್, ಹೆಲ್ಪರ್ ಹಾಗೂ ಸೆಕ್ಯೂರಿಟಿ ಹುದ್ದೆಗಳಿಗೆ ಅನುಭವಕ್ಕನುಗುಣವಾಗಿ ಆಯ್ಕೆ ಮಾಡಲಾಗುತ್ತದೆ. ವಯೋಮಿತಿ ೧೮ರಿಂದ ೩೫ ವರ್ಷದೊಳಗಿರಬೇಕು.

Contact Your\'s Advertisement; 9902492681

ಕಲಬುರಗಿ ಸಮಸ್ತ ಮೈಕ್ರೋ ಫೈನಾನ್ಸ್‌ನಲ್ಲಿ ಕಸ್ಟಮರ್ ರಿಲೇಶನ್‌ಶಿಫ್ ಆಫೀಸರ್, ಸಿನಿಯರ್ ಸಿ.ಆರ್.ಒ., ಆಡಿಟರ್ ಹುದ್ದೆಗಳಿಗೆ ಪಿ.ಯು.ಸಿ., ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೨೮ ವರ್ಷದೊಳಗಿರಬೇಕು. ಕಲಬುರಗಿ ಭಾರತಿ ಅಕ್ಸಾ ಲೈಫ್ ಇನ್ಸೂರನ್ಸ್‌ನಲ್ಲಿ ಅಡ್ವೈಸರ್ ಹುದ್ದೆಗಳಿಗೆ ಪಿ.ಯು.ಸಿ. ಮತ್ತು ಯಾವುದೆ ಪದವಿ ಪಾಸಾಗಿರಬೇಕು.

ಕಲಬುರಗಿಯ ಎ.ಬಿ. ಪವರ‍್ಸ್ ಸಿಸ್ಟಮ್‌ನಲ್ಲಿ ಫೀಲ್ಡ್ ಸರ್ವಿಸ್ ಇಂಜಿನಿಯರ್ ಹುದ್ದೆಗೆ ಡಿಪ್ಲೋಮಾ, ಐ.ಟಿ.ಐ.ದಲ್ಲಿ (ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರೀಕಲ್), ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಕಂಪ್ಯೂಟರ್ ಜ್ಞಾನ ಮತ್ತು ಟ್ಯಾಲಿ, ಹೆಲ್ಪರ್ ಹಾಗೂ ಆಫೀಸ್ ಬಾಯ್ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೆ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here