ಗೊಂಡ ಸಿಂಧುತ್ವ ಪ್ರಮಾಣಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ

0
112

ಕಲಬುರಗಿ: ಗೊಂಡ, ರಾಜಗೊಂಡ, ಕಾಡುಕುರುಬ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ಕೊಡಬೇಕೆಂದು ಆಗ್ರಹಿಸಿ ಶನಿವಾರ ಶ್ರೀ ಆರ್. ವರ್ತೂರ್ ಪ್ರಕಾಶ್‌ರವರ ಅಭಿಮಾನಿಗಳ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಸಂಘದ ಅಧ್ಯಕ್ಷ ಶಿವಾಜಿ ಎಸ್. ಪಟ್ಟಣ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗುಂಡಪ್ಪ ಇವಣಿ, ಎಸ್.ಎಂ. ರಾಯಪಲ್ಲಿ, ಸುರೇಂದ್ರ ಪಟ್ಟಣ್, ರುಕ್ಕಪ್ಪ ಟಿ. ಕಾಂಬಳೆ, ಲಕ್ಷ್ಮಣರಾವ್ ಪೋಲಿಸ್ ಪಾಟೀಲ್, ಹಣಮಂತಪ್ಪಾ ಹಿರೇಮನಿ, ರವಿ ಸುಗೂರ್, ರವಿಗೊಂಡ್ ಕಟ್ಟಿಮನಿ, ಅಮೀರಸಾಬ್ ನದಾಫ್, ಮಲ್ಲು ಆಲಗೂಡ್, ಸಿದ್ದಾರೂಢ ಆರ್. ಧುಮ್ಮನಸೂರ್, ವೀರಭದ್ರಪ್ಪ ಬೋಜಪ್ಪಾ, ಶಿವಲಿಂಗ್ ವಗ್ಗಿ, ಶಿವಾಜಿ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯಾದ್ಯಂತ ಗೊಂಡ, ರಾಜಗೊಂಡ, ಕಾಡುಕುರುಬ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ಕೊಡಲು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಧಿಕಾರಿಗಳ ಕಿರುಕುಳ ತಪ್ಪಿಸಲು ಕೂಡಲೇ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ಶೀಘ್ರ ವಿಲೇವಾರಿಗೆ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಿತ್ತೂರ್ ಸಂಸ್ಥಾನದ ರಾಜ್ಯ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಸಂಗೊಳ್ಳಿ ರಾಯಣ್ಣ ಅವರಿಗೆ ಬ್ರಿಟಿಷರು ಕುತಂತ್ರಕ್ಕೆ ಸಿಲುಕಿ ೧೯೩೧ರ ಜನವರಿ ೨೬ರಂದು ಗಲ್ಲಿಗೇರಿಸಲ್ಪಟ್ಟರು. ಅವರ ತ್ಯಾಗ, ಬಲಿದಾನ ಇಡೀ ರಾಜ್ಯಕ್ಕೆ ಮತ್ತು ಮುಂಬರುವ ಯುವ ಜನಾಂಗಕ್ಕೆ ಸ್ಫೂರ್ತಿ ಆಗಲು ರಾಜ್ಯ ಸರ್ಕಾರವು ಮುಂಬರುವ ಜನವರಿ ೨೬ರಂದು ಜರುಗುವ ಗಣರಾಜ್ಯೋತ್ಸವ ಹಾಗೂ ಆಗಸ್ಟ್ ೧೫ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರ ಕಡ್ಡಾಯವಾಗಿ ಕಚೇರಿಗಳಲ್ಲಿ ಹಾಕುವಂತೆ ಆದೇಶ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here