ನೀಟ್ ಪರೀಕ್ಷೆಗೆ ಎಸ್‍ಬಿಆರ್ ಕಾಲೇಜು ಬ್ರಾಂಡ್

0
20

ವಿದ್ಯಾರ್ಥಿಗಳಿಗೆ ನಗದು ಬಹುಮಾನ; ನೀಟ್ ಪರೀಕ್ಷೆಯಲ್ಲಿ ಶ್ರೀಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್‍ಬಿಆರ್ ಕಾಲೇಜಿನಲ್ಲಿ 720ಕ್ಕೆ 691 ಅಂಕ ಪಡೆದ ವಿದ್ಯಾರ್ಥಿ ವೇದಾಂತ ರವಿ ಪಾಟೀಲ್ ಅವರನ್ನು ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀಶರಣಬಸವಪ್ಪ ಅಪ್ಪಾ ಅವರು 1 ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾನಿದರು. 687 ಅಂಕ ಪಡೆದ ಶ್ರೀವμರ್Á ಭೀಮಪ್ಪ ಅವರಿಗೆ 75 ಸಾವಿರ ರೂ. ನಗದು ಬಹುಮಾನ ನೀಡುವ ಮೂಲಕ ಸನ್ಮಾನಿಸಲಾಯಿತು. ನಾಲ್ಕನೆ ಸ್ಥಾನ ಪಡೆದ 675 ಅಂಕ ಪಡೆದ ಸಂಗಮೇಶ ಸಿದ್ದಣ್ಣ ಎಸ್ ಅವರಿಗೆ 50 ಸಾವಿರ ರೂ. ಬಹುಮಾನ ನೀಡಿ ಸನ್ಮಾನ ಮಾಡಲಾಯಿತು.

ಕಲಬುರಗಿ: ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ಎಸ್‍ಬಿಆರ್ ಕಾಲೇಜಿನ 33 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀಶರಣಬಸವಪ್ಪ ಅಪ್ಪಾ ಹಾಗೂ ಶ್ರೀಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪಾ ಹೇಳಿದರು.

Contact Your\'s Advertisement; 9902492681

ನೀಟ್ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಟಾಪ್ ರ್ಯಾಂಕ್ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯ ಹಲವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕ ಗಳಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಶ್ರೀ ಶರಣಬಸವೇಶ್ವರ ಆಶೀರ್ವಾದ ಸದಾ ಇರಲಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣವಿದೆ. ಈ ಲಿತಾಂಶದ ಹಿಂದೆ ಶಿಕ್ಷಕರ ಕಾಳಜಿ ಪೂರಕ ಬೋಧನೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶ್ರೀಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಈ ಬಾರಿ ಸುಮಾರು 33 ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚಿನ ಅಂಕ, 48 ವಿದ್ಯಾರ್ಥಿಗಳು 500ರಿಂದ 600 ಅಂಕ, 55 ವಿದ್ಯಾರ್ಥಿಗಳು 550ರಿಂದ 600ರವರೆಗೆ ಅಂಕ ಪಡೆದಿದ್ದಾರೆ. ಇವರೆಲ್ಲರಿಗೂ ವೈದ್ಯಕೀಯ ಕೋರ್ಸ್ ಅರ್ಹತೆ ಪಡೆಯುವ ಮೂಲಕ ಸಂಸ್ಥೆ ಹೆಸರನ್ನು ಬಾನೆತ್ತರಕ್ಕೆ ಮುಟ್ಟಿಸಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿದರು.

ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ, ಕಾಲೇಜು ಮೇಲ್ವಿಚಾರಕ ಶ್ರೀಶೈಲ ಹೊಗಾಡೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಗುರುಲಿಂಗ ಮಠಪತಿ, ಚಂದ್ರಕಾಂತ ಸೇರಿ ವಿದ್ಯಾರ್ಥಿಗಳ ಪಾಲಕರು, ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here