ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಮಂಗಳವಾರ 69ನೇ ಕನ್ನಡ ರಾಜ್ಯೋತ್ಸವವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಭಾಗದ ಹೆಸರಾಂತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರು ದೀಪ ಬೇಳಗಿಸುವ ಮೂಲಕ ಉದ್ಘಾಟಿಸಿದರು. ಕರುನಾಡಿನ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಕಾರ್ಯಾಲಯದಲ್ಲಿ ಬೇರೆ ರಾಜ್ಯದ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ. ಆದರೂ ಕೂಡ ಪ್ರತಿ ವರ್ಷ ಈ ಕಚೇರಿಯಲ್ಲಿ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವುದು ವಿಶೇಷವಾಗಿದೆ. ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಸಿಬ್ಬಂದಿಗಳಿಗೆ ನಗಿಸುತ್ತಲೇ ವಿಶೇಷವಾದ ಸಂದೇಶಗಳನ್ನು ಸಾರುವ ಮೂಲಕ ಕಾರ್ಯಕ್ರಮದಲ್ಲಿ ನೇರೆದ ಜನರಿಗೆ ಮನೋರಂಜಿಸಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರವಿ ಯಾದವ, ಮನೋರಂಜನಾ ಸಂಘದ ಕಾರ್ಯದರ್ಶಿ ಬಸವರಾಜ ಹೆಳವರ, ವಿಠ್ಠಲ, ಅರ್ಸ್ಲಾನ್ ಕಿತ್ತೂರ, ಬಿ. ರವೀಂದ್ರ, ಮದನ ಕುಲಕರ್ಣಿ, ವಿನೋದ ಕಣಬೂರ, ಮಹ್ಮದ್ ಯೂಸುಫ್, ಅರುಣಕುಮಾರ, ಸುಜಯ ಬಿಸ್ವಾಸ್, ರವೂಫ್ ಪಟೇಲ್, ಶಿವಶರಣಪ್ಪ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಪ್ರಶಾಂತ ಇಂಗಳೇಶ್ವರ ನಿರೂಪಿಸಿದರು. ಜಗನ್ನಾಥ ಸ್ವಾಗತಿಸಿದರು. ಕೇಶವರಾವ ಕುಲಕರ್ಣಿ ವಂದಿಸಿದರು.