ಶಹಾಬಾದ: ಜಾತಿ-ಬೇಧ ಎನ್ನದೇ ಸರ್ವರಿಗೂ ಮೂಲಭೂತ ಹಕ್ಕನ್ನು ಒದಗಿಸಿ, ಬದುಕುವ ವಾತಾವರಣ ಸೃಷ್ಠಿಸಿದ್ದೇ ಡಾ. ಬಿ .ಆರ್. ಅಂಬೇಡ್ಕರ್ ಬರೆದ ಸಂವಿಧಾನ ಎಂದು ಯಾರು ಮರೆಯಬಾರದೆಂದು ಉಪನ್ಯಾಸಕ ಪಿ.ಎಸ್.ಮೇತ್ರಿ ಹೇಳಿದರು.
ಅವರು ಮಂಗಳವಾರ ನಗರದ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ 75ನೇ ಸಂವಿಧಾನ ಸಮರ್ಪಣ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶ ಮನು ಸ್ಮೃತಿ ಕಾಲದಲ್ಲಿ ಮೂಲ ನಿವಾಸಿಗಳಿಗೆ ವಿದ್ಯೆ ಸಂಪತ್ತು, ಆಭರಣ ಸಂಪತ್ತು, ಉದ್ಯೋಗ ಸಂಪತ್ತು, ಆಹಾರ ನಿರಾಕರಿಸಲ್ಪಟ್ಟಿತ್ತು. ಆದರೆ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ಬಂದ ಜಾರಿಗೆ ಬಂದ ನಂತರ ಮೇಲೆ ಇವೆಲ್ಲವನ್ನು ಪಡೆಯಲು ಸಾಧ್ಯವಾಯಿತು.
12ನೇ ಶತಮಾನದ ಶರಣರು ಸ್ತ್ರೀಯರಿಗೆ ಕೊಟ್ಟ ಸ್ಥಾನಮಾನವನ್ನು ಸಂವಿಧಾನದಲ್ಲಿ ನೀಡಲಾಗಿದೆ. ಇಂದು ಸ್ತ್ರೀಯರು ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದರೆ ಡಾ. ಬಿ. ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನ ಕಾರಣ ಎಂದು ತಿಳಿದುಕೊಳ್ಳುವ ಅವಶ್ಯಕತೆಯಿದೆ.ಪ್ರತಿಯೊಬ್ಬ ಭಾರತೀಯರು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ತಿಳಿದುಕೊಳ್ಳುವುದು ಅಗತ್ಯವಾಗಿದೆ.ಸಂವಿಧಾನ ಇಲ್ಲದೆ ಹೋದರೆ ಒಂದು ನಿಮಿಷ ಕೂಡ ಶಾಂತಿಯಿಂದ ಆಡಳಿತ ಮಾಡೋಕೆ ಆಗುತ್ತಿರಲಿಲ್ಲ ಎಂದು ಹೇಳಿದರು.
ಮುಖ್ಯ ಗುರುಗಳಾದ ಸಿಸ್ಟರ್ ಅನಸ್ತಶೀಯ ಮಾತನಾಡಿ, ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ.ಸಂವಿಧಾನ ನಮ್ಮ ಧರ್ಮಗ್ರಂಥವಿದ್ಧಂತೆ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಜೆರಾಲ್ಡ ಸಾಗರ್ ಮಾತನಾಡಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಸಂವಿಧಾನ ರಚಿಸಿ, ದೇಶಕ್ಕೆ ಭದ್ರ ಬುನಾದಿ ಒದಗಿಸಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನದ ಶಿಲ್ಪಿ ಎಂದು ಕರೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸಾಯಬಣ್ಣ ಇಜೆರಿ, ಇಮಾನುವೆಲ್ , ಪ್ರಿಯಾ, ಮಹೇಶ್ವರಿ, ನಂದಿನಿ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಡಾ. ಬಿ. ಆರ್. ಅಂಬೇಡ್ಕರ್ ಪುತ್ತಳಿಯಿಂದ ಮುಖ್ಯರಸ್ತೆಗಳಲ್ಲಿ ಸಂವಿಧಾನ ಗೌರವಿಸುವ, ಎತ್ತಿ ಹಿಡಿಯುವ ಸ್ಲೋಗನ್ ಗಳನ್ನು, ವಿದ್ಯಾರ್ಥಿಗಳನ್ನು ಹೇಳುತ್ತಾ ಶಾಲೆಗೆ ತಲುಪಿದರು.
ಶಿಕ್ಷಕಿ ಮಾಲತಿ ನಿರೂಪಿಸಿದರು,ಶಿಕ್ಷಕಿ ಪ್ರೀಯಾ ಸ್ವಾಗತಿಸಿದರು, ಶಿಕ್ಷಕಿ ರೂಪಾ ವಂದಿಸಿದರು.