ಕಾಳಗಿ; ಇಲ್ಲಿನ ರಟಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ಸಂಘದ ಕಚೇರಿಯಲ್ಲಿ ಇ- ಸ್ಟ್ಯಾಂಪ್ ಸೇವೆ ಆರಂಭಗೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಮಹಾದೇವಪ್ಪ ಎಸ್. ಭೀಮಳ್ಳಿ ತಿಳಿಸಿದ್ದಾರೆ.
ರಟಕಲ್ ಗ್ರಾಮ ಪಂಚಾಯಿತ್ ವ್ಯಪ್ತಿಯಲ್ಲಿ ಇ- ಸ್ಟ್ಯಾಂಪ್ ಸೇವೆ ಇಲ್ಲದಿರುವುದರಿಂದ 10ಕ್ಕೂ ಹೆಚ್ಚು ಹಳ್ಳಿಗಳ ಜನರು ಕಾಳಗಿ, ಕೊಡ್ಲಿ ಸೇರಿದಂತೆ ದೂರದ ಪಟ್ಟಣ ಮತ್ತು ಹೋಬಳಿ ಮಟ್ಟದ ಸೇವಾ ಕೇಂದ್ರಗಳಿಂದ ಸೇವೆ ಪಡೆಯಲು ಪರದಾಡುವ ಸ್ಥಿತಿ ಇತ್ತು, ಸಂಘದ ಆಡಳಿತ ಮಂಡಳಿಗಳ ಸಹಾಕರ ಮತ್ತು ಒಮ್ಮತದಿಂದ ರಟಕಲ್ ಕೃಷಿ ಸಹಕಾರದಲ್ಲಿ ಇ- ಸ್ಟ್ಯಾಂಪ್ ಸೇವೆ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರು ಇಂದಿನಿಂದ ಸಂಘಕ್ಕೆ ಭೇಟಿ ನೀಡಿ ಇ- ಸ್ಟ್ಯಾಂಪ್ ಸೇವೆಯ ಲಾಭ ಪಡೆಯಬೇಕೆಂದು ಆಡಳಿತ ಮಂಡಳಿಯ ಸದಸ್ಯರಾದ ಬಸಮ್ಮ ಎಮ್ ಗುರಮಿಟಕಲ್, ನಾಗರಾಜ್ ಎಸ್ ಹಂದ್ರೊಳಿ, ಮಸ್ತಾನ ಸಾಬ್ ಎಮ್ ಜೀವಣಗಿ, ರೇವಣಸಿದ್ದಪ್ಪ ಸೀಗಿ, ಬಿರಪ್ಪ ಪೂಜಾರಿ, ಕಲಾವತಿ ಎಮ್ ಬಿರಾದಾರ, ಸಾಬಣ್ಣಾ ಎಮ್ ರುಸ್ತಂಪೂರ, ಶಂಭುಲಿಂಗ್ ಜಿ ಖಜೂರಿ, ಗುರುಲಿಂಗಯ್ಯಾ ಎಮ್ ಹಿರೇಮಠ, ಅಣ್ಣಾರಾಯ್ಯ ಬಿರಾದಾರ ಸೇರಿದಂತೆ ಸಿಬ್ಬಂದಿ ವರ್ಗ ಸಾರ್ವಜನಿಕರು ಇದರ ಲಾಭ ಪಡೆಯಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.