ರುಕ್ಮಾಪುರ:ಕಟ್ಟಡ ಕಾರ್ಮಿಕರ ಹೋಬಳಿ ಮಟ್ಟದ ಸಭೆ

0
16

ಸುರಪುರ:ತಾಲೂಕಿನ ಖಾನಾಪುರ ಎಸ್.ಎಚ್ ಗ್ರಾಮ ಪಂಚಾಯತಿಯ ರುಕ್ಮಾಪುರ ಗ್ರಾಮದಲ್ಲಿ ಗ್ರಾಮದಲ್ಲಿ ಕಟ್ಟಡ ಕಟ್ಟುವ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ (ಎಐಟಿಯುಸಿ ಸಂಯೋಜನೆ) ಹೋಬಳಿ ಘಟಕದ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಐಟಿಯುಸಿ ಜಿಲ್ಲಾ ಅಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ, ಸುಮಾರು 15 ಹಳ್ಳಿಗಳನ್ನು ಹೊಂದಿರುವ ರುಕ್ಮಾಪುರ 15000 ಕಟ್ಟಡ ಕಾರ್ಮಿಕರನ್ನು ಹೊಂದಿದೆ. ಇದರಲ್ಲಿ ಕೆಲವು ಕಟ್ಟಡ ಕಾರ್ಮಿಕರು ಎರಡೊಪ್ಪತ್ತಿಗಾಗಿ ದೂರದ ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ ಎಲ್ಲಾ ಕಟ್ಟಡ ಕಾರ್ಮಿಕರಿಗೂ ಸರಕಾರದ ಕಾರ್ಮಿಕ ಇಲಾಖೆಯ ಯೋಜನೆ ಸೌಲಭ್ಯ ಸಿಗುವಂತಾಗಬೇಕು ಎಂದರು.ಅಲ್ಲದೆ ಸಂಘಟನೆಯ ಹುಟ್ಟು ಹಾಗೂ ಕಾರ್ಯದ ಕುರಿತು ವಿವಿರಿಸಿದರು.

Contact Your\'s Advertisement; 9902492681

ಸಭೆಯಲ್ಲಿ ಹೊಸ ನೊಂದಣಿ, ನವೀಕರಣ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಕಾಲಮಿತಿಯೊಳಗೆ ಸಿಗುವಂತಾಗಲು ಬಲಿಷ್ಠ ಸಂಘಟನೆ ಕಟ್ಟುವ ಸಂಕಲ್ಪ ಮಾಡಲಾಯಿತು.

ಬೋಗಸ್ ನೊಂದಣಿ ರದ್ದುಪಡಿಸುವುದು ಹಾಗೂ ಬೋಗಸ್ ನೊಂದಣಿಯಾಗದಂತೆ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಹೋಬಳಿ ಮತ್ತು ಗ್ರಾಮೀಣ ಭಾಗದಲ್ಲಿ ಸಂಘಟನೆ ಕಟ್ಟುವುದು, ಸುಮಾರು ಮೂರು ಸಾವಿರ ಸದಸ್ಯತ್ವ ಮಾಡಲು ಸದಸ್ಯತ್ವ ಅಭಿಯಾನ ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

ಈ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ತಿಮ್ಮಯ್ಯ ಧೊರಿ ಡೊಣ್ಣಿಗೇರಿ,ಅಧ್ಯಕ್ಷ ದೇವೇಂದ್ರಪ್ಪ ನಗರಗುಂಡ, ತಿಮ್ಮಯ್ಯ ತಳವಾರ ದೇವಿಕೇರಿ ಪ್ರಧಾನ ಕಾರ್ಯದರ್ಶಿ, ಮರೆಪ್ಪ ದೇಸಾಯಿ ದೊಣ್ಣಿಗೇರಿ, ಮಹಿಬೂಬ ಸೇರಿದಂತೆ ಅನೇಕರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ರುಕ್ಮಾಪುರ ಹೋಬಳಿ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here