ವಿದ್ಯುತ್ ದರ ಹೆಚ್ಚಳ ಬೇಡ

0
54

ಕಲಬುರಗಿ: ಪ್ರಸಕ್ತ ಜೂನ್ ತಿಂಗಳ ವಿದ್ಯುತ್ ದರ ಹೆಚ್ಚಳವು ಪ್ರತಿ ಯುನಿಟ್ ಗೆ 2.89ರೂ.ಗಳಷ್ಟು ಹೆಚ್ಚಾಗುತ್ತದೆ ಎಂಬ ವರದಿಗಳು ಉದ್ಯಮ ವಲಯದಲ್ಲಿ, ವಿಶೇಷವಾಗಿ ರಾಜ್ಯದ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದದ ಕೈಗಾರಿಕೆಗಳಿಗೆ ಬೃಹತ್ ಪ್ರಮಾಣದ ಆಘಾತ ಉಂಟು ಮಾಡಲಿದೆ ಎಂದು ಕನ್ನಡಪರ ಹೋರಾಟಗಾರ ಆನಂದ ತೆಗನೂರ ಹೇಳಿದ್ದಾರೆ.ವಿದ್ಯುತ್ ದರ ಹೆಚ್ಚಳ ವ್ಯಾಪ್ತಿಯ ಬಗ್ಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಮೇ 12ರ ಆದೇಶದಂತೆ ಏಪ್ರಿಲ್ ಗೆ ಸಂಬಂಧಿಸಿದ ಅನುಮೋದಿತ 70 ಪೈಸೆ ಹೆಚ್ಚಳದ ಬಾಕಿ ಮತ್ತು ಜನವರಿಯ ಇಂಧನ ಮತ್ತು ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕದ ಕಾರಣದಿಂದ ಅಸಹಜ ಹೆಚ್ಚಳವಾಗಿದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ.ಆದರೆ ಇದು ಉದ್ಯಮದ ಮೇಲಿನ ಹೊರೆಯನ್ನು ತಗ್ಗಿಸುವ ರೀತಿಯಲ್ಲಿ ನಿಗದಿಪಡಿಸಬೇಕಾಗಿತ್ತು.

Contact Your\'s Advertisement; 9902492681

ಆರ್ಥಿಕತೆಯೂ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಅಥವಾ ಕನಿಷ್ಠ ಎರಡು ವರ್ಷಗಳ ವರೆಗೆ ಉದ್ಯಮಗಳನ್ನು ಘಾಸಿಗೊಳಿಸುವ ಯಾವುದೇ ರೀತಿಯ ಏರಿಕೆಗಳನ್ನು ಮಾಡದಂತೆ ನಾವು ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತೇವೆ ಎಂದರು ಆದರೆ ಸರಕಾರಕ್ಕೆ ನಮ್ಮ ಧ್ವನಿ ಕೇಳುತ್ತಿಲ್ಲ ಎಂದು ವಿಷಾಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here