ಅರೋಗ್ಯ ವೃದ್ಧಿಗೆ ಯೋಗವೇ ಸಂಜೀವಿನಿ : ಪ್ರೊ. ರಾಜನಳ್ಕರ್ ಲಕ್ಷ್ಮಣ್

0
29

ಕಲಬುರಗಿ: ಯೋಗದಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಬಲವರ್ಧನೆ ಹಾಗೂ ಅರೋಗ್ಯ ಸಾಮರ್ಥ್ಯ ವೃದ್ಧಿಗೆ ಸಂಜೀವಿನಿಯಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿತ್ತಧಿಕಾರಿ ಪ್ರೊ. ರಾಜಾನಳ್ಕರ್ ಲಕ್ಷ್ಮಣ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಸಮುದಾಯ ಭವನದಲ್ಲಿ ಆಯೋಜಿಸಿದ ‘9ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ’ ಯನ್ನು ಮುಖ್ಯ ಅತಿಥಿಯಾಗಿ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಮನುಷ್ಯ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅವುಗಳಿಂದ ಮುಕ್ತಿ ಪಡೆಯಲು ಯೋಗ ಒಂದೇ ಪರಿಹಾರ ಎಂಬುದು ಹಲವು ಸಂಶೋಧನೆ ಮತ್ತು ಪರಿಹಾರ ಉಪಕ್ರಮಗಳಿಂದ ಸಾಬೀತಾಗಿದೆ. ಅದರಿಂದ ವಿಶ್ವಸಂಸ್ಥೆ ನಿರ್ಣಯದಂತೆ ವಿಶ್ವ ಯೋಗ ದಿನಾಚರಣೆಯನ್ನು 21 ಜೂನ್ 2015 ರಿಂದ ಆಚರಿಸಲಾಗುತ್ತಿದೆ ಎಂದರು.

ನಂತರ ಭಾಗವಹಿಸಿದ ವಿಶ್ವ ವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಮೂಲಕ ಯೋಗ ಆಚರಣೆಯನ್ನ ಯಶಸ್ವಿಗೊಳಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಎನ್. ಜಿ. ಕಣ್ಣೂರು, ವಿದ್ಯಾ ವಿಷೇಯಕ ಪರಿಷತ್ ಸದಸ್ಯ ಹಾಗೂ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ವಿಜಯ, ಡಾ. ದೇವೇಂದ್ರಪ್ಪ ತೆಲ್ಕೂರ್, ಪರೀಕ್ಷಾ ವಿಭಾಗದ ವಿಶೇಷಧಿಕಾರಿ ಪ್ರೊ. ಬಸವರಾಜ ಸಣ್ಣಕ್ಕಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಚಂದ್ರಕಾಂತ ಬಿ. ಬಿರಾದಾರ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here