ಬಿಸಿಲಿನ ತಾಪಕ್ಕೆ ನಲುಗಿಹೋಗಿದ್ದ ಜನತೆಗೆ ತಂಪೆರೆದ ಮಳೆ

0
23

ಶಹಾಬಾದ: ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ನಲುಗಿಹೋಗಿದ್ದ ಜನತೆಗೆ ಶನಿವಾರ ಸಾಯಂಕಾಲ ಸುರಿದ ಮಳೆ ಇಳೆಯನ್ನು ತಂಪಾಗಿಸಿ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು.

ಸಾಯಂಕಾಲ 5 ಗಂಟೆಗೆ ಪ್ರಾರಂಭವಾದ ಪ್ರಸಕ್ತ ವರ್ಷದ ಮೊದಲ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿಯಿತು. ಇದುವರೆಗೂ ಮಳೆಬಾರದೆ ಮನೆಯ ಮೂಲೆ ಸೇರಿದ್ದ ಕೊಡೆಗಳು, ರೇನ್‍ಕೋಟ್‍ಗಳು ಧೂಳು ಕೊಡವಿಕೊಂಡು ಹೊರಗೆ ಬಂದವು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿ ರಸ್ತೆಗಳಲ್ಲ ಬಿಕೋ ಎನ್ನುತ್ತಿದ್ದವು. ಗ್ರಾಮೀಣ ಭಾಗದಿಂದ ವಿವಿಧ ವಸ್ತುಗಳ ಖರೀದಿಗಾಗಿ ನಗರಕ್ಕೆ ಆಗಮಿಸದ್ದ ಜನತೆ ಏಕಾಏಕಿ ಸುರಿದ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಆಶ್ರಯ ಪಡೆದರು.

Contact Your\'s Advertisement; 9902492681

ಪ್ರಸಕ್ತ ವರ್ಷದ ಆರಂಭವಾದ ಮಳೆ ತಡವಾದರೂ ಬಂತಲ್ಲಾ ಎಂದು ಜನರಲ್ಲಿ ಸಂತೋಷ ಕಂಡಿತು.ರೈತರಲ್ಲಿ ಕೊಂಚ ಮಂದಹಾಸ ಮೂಡಿತು. ನಗರದ ಮುಖ್ಯ ರಸ್ತೆಗಳಲ್ಲಿ ನೀರು ಆವರಿಸಿಕೊಂಡು ಸಂಚಾರಕ್ಕೆ ತೊಂದರೆಯಾದರೆ, ನಗರದ ಸ್ವಾಗತ ಕಮಾನನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಕಷ್ಟ ಎದುರಿಸುವಂತಾಯಿತು. ನಗರದ ವಿವಿಧಕಡೆ ವಿದ್ಯುತ್ ಕಣ್ಣು ಮುಚ್ಚಾಲೆ ಕಂಡು ಬಂದಿತು. ರಾತ್ರಿಯೆಲ್ಲಾ ಹನಿ ನೀರು ಕಡಿಯುತ್ತಿರುವುದು ಕಂಡು ಬಂದಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here