ಲಿಂಗಸಗೂರು: ದೇವದುರ್ಗ ಬಿಇಓ ಮೇಲೆ ಹಲ್ಲೆ ನಡೆಸಿದ ಖಾಸಗಿ ಶಾಲೆ ಮುಖ್ಯಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಇಂದು ಎಸ್ಎಫ್ಐ ಕಾರ್ಯಕರ್ತರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಯವರಿಗೆ ನೀಡಲಾಯಿತು.
ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿರುವ ಶ್ರೀ ಭಾಗ್ಯವಂತಿ ಪ್ರಾಥಮಿಕ ಖಾಸಗಿ ಶಾಲೆಯಲ್ಲಿ ಸರ್ಕಾರದ ಮತ್ತು ಶಿಕ್ಷಣ ಇಲಾಖೆಯ ನಿಯಮಗಳನ್ನು ಉಲಂಘನೆ ಮಾಡಿ ಪಾಲಕರಿಂದ ಶುಲ್ಕದ ರೂಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ವಿರೋಧಿಸಿ ಅದನ್ನು ತಡೆಗಟ್ಟಲು ಒತ್ತಾಯಿಸಿ ದೇವದುರ್ಗ ಎಸ್ಎಫ್ಐ ವತಿಯಿಂದ ಸಂಭಂದಿಸಿದ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಇದರ ಭಾಗವಾಗಿ ಇತ್ತಿಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆ ಶಾಲೆಯ ಮುಖ್ಯಸ್ಥರ ಶಿಸ್ತು ಕ್ರಮಕ್ಕೆ ಮುಂದಾಗಿರುತ್ತಾರೆ.
ಇದು ಸಹಿಸಿಕೊಳ್ಳದೆ, ಖಾಸಗಿ ಶಾಲೆಗಳ ಮುಖ್ಯಸ್ಥರು ದಿನಾಂಕ 23-06-2023ರಂದು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಾಲಹಳ್ಳಿ ಗ್ರಾಮದ ಜೆ ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಶಿಕ್ಷಕರಿಗೆ ಹಾಗೂ ಬಿಸಿಯೂಟ ನೌಕರರಿಗೆ ಒಂದು ದಿನದ ತರಬೇತಿ ಶಿಬಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಭಾಗ್ಯವಂತಿ ಶಾಲೆಯ ಮುಖ್ಯಸ್ಥರಾದ ಶರಣು ಹುಣಸಿಗಿ ಹಾಗೂ ನಕ್ಷತ್ರ ಪೂರ್ವ ಹಿರಿಯ ಪ್ರಾಥಮಿಕ ಶಾಲೆ ಗಾಣದಾಳ ಮುಖ್ಯಸ್ಥ ಬಸವರಾಜ ಪಾಟೀಲ್ ಏಕಾಏಕಿ ಸಭೆಗೆ ನುಗ್ಗಿ ಮಕ್ಕಳ ಮತ್ತು ಪೋಷಕರೆ ಎದುರೆ ಕರ್ತವ್ಯದ ಮೇಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಯ ಮೇಲೆ ಹಲ್ಲೆ ಮಾಡಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆಯನ್ನು ಹಾಕಿರುತ್ತಾರೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಲಿಂಗಸಗೂರು ತಾಲೂಕು ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಈಗಾಗಲೇ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಿಬೇಕು ಹಾಗೂ ಶಾಲೆಯ ಮಾನ್ಯತೆಯನ್ನು ರದ್ದು ಪಡಿಸಬೇಕು. ಅಲ್ಲದೆ ಗೂಂಡಾಡಟ ಪ್ರವೃತ್ತಿ ಹೊಂದಿದ ಈ ವ್ಯಕ್ತಿಗಳ ಮೇಲೆ ಗುಂಡಾ ಪಟ್ಟಿ ತೆರೆದು ಗಡಿಪಾರು ಮಾಡಬೇಕೆಂದು ಈ ಮನವಿಯ ಮೂಲಕ ಎಸ್‌ಎಫ್‌ಐ ಲಿಂಗಸ್ಗೂರು ಒತ್ತಾಯಿಸಿದೆ.
ಈ ಸಂಧರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕು ಮುಖಂಡರಾದ ವಿಶ್ವ ಅಂಗಡಿ, ಪವನ್ ಕಮದಾಳ, ಮೌನೇಶ, ಶರತ್ ಪಾಟೀಲ್, ಮೌನುದ್ದೀನ್, ಉದಯ್ ಕುಮಾರ್, ಶರಣಬಸವ ಆನೆ ಹೊಸೂರ್, ಲಾಲ್ ಪೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.