ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

0
10

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದು ಹಿರಿಯ ನ್ಯಾಯವಾದಿ ವೈಜನಾಥ ಎಸ್ ಝಳಕಿ ಹೇಳಿದರು.

ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ” ಕುರಿತು ಉಪನ್ಯಾಸ ನೀಡಿದ ಝಳಕಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ಪರಿಣಾಮಕಾರಿತ್ವದ ಬಗ್ಗೆ ಶಾಸಕಾಂಗ, ಕಾಯಾರ್ಂಗ ಮತ್ತು ಮಾಧ್ಯಮಗಳ ವೈಫಲ್ಯದಿಂದಾಗಿ ಜನರಲ್ಲಿರುವ ವಿಶ್ವಾಸ ಇತ್ತೀಚಿನ ದಿನಗಳಲ್ಲಿ ಕುಸಿಯುತ್ತಿದೆ. ನ್ಯಾಯಾಂಗವು ಜನರ ಹಕ್ಕುಗಳನ್ನು ರಕ್ಷಿಸಲು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಒಂದು ಮಟ್ಟಿಗೆ ಸಂವಿಧಾನದಲ್ಲಿ ಪರಿಣಾಮಕಾರಿಯಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದೆ ಎಂದರು.

Contact Your\'s Advertisement; 9902492681

ಸಂಕುಚಿತ ಮತ್ತು ಇತರ ಕಾರಣಗಳಿಂದಾಗಿ ಶಾಸಕಾಂಗ, ಕಾಯಾರ್ಂಗ ಮತ್ತು ಪತ್ರಿಕಾ ಸಂಸ್ಥೆಗಳು ಸಂವಿಧಾನದ ಮೂಲಭೂತ ಹಕ್ಕುಗಳ ಅನುμÁ್ಠನವನ್ನು ಖಚಿತಪಡಿಸಿಕೊಳ್ಳಲು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ನ್ಯಾಯಾಂಗವು ಕೂಡ ಒಂದು ಹಂತದವರೆಗೆ ವಿಫಲವಾಗಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ನಂಬಿಕೆಯ ಸವೆತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಝಳಕಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ಮೊದಲು ಸಂವಿಧಾನದಲ್ಲಿ ಒದಗಿಸಿರುವ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿತು ಅದನ್ನು ರಕ್ಷಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕು. “ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಜವಾಬ್ದಾರಿಗಳ ಅವನತಿಯನ್ನು ನಿಲ್ಲಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಯುವ ಪೀಳಿಗೆಯು ಏಕೈಕ ಭರವಸೆಯಾಗಿದೆ” ಎಂದು ಒತ್ತಿ ಹೇಳಿದರು.

ಭಾರತೀಯ ಸಂವಿಧಾನದ ವಿವಿಧ ವೈಶಿಷ್ಟ್ಯಗಳನ್ನು ವಿವರಿಸಿದ ಶ್ರೀ ಝಳಕಿ, ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವು ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇದು ಜನರ ಎಲ್ಲಾ ಹಕ್ಕುಗಳನ್ನು ಒಳಗೊಂಡಿರುವ ಮತ್ತು ನಾಗರಿಕರಾಗಿ ಅವರ ಹಕ್ಕುಗಳನ್ನು ಸ್ಪಷ್ಟವಾಗಿ ಸೂಚಿಸುವ ವಿಶ್ವದ ಅತ್ಯಂತ ಸುದೀರ್ಘವಾದ ಲಿಖಿತ ಸಂವಿಧಾನವಾಗಿದೆ ಎಂದು ಹೇಳಿದರು.

ಎಲ್ಲಾ ನಾಗರಿಕರಿಗೆ ಅವರ ಜಾತಿ, ಬಣ್ಣ ಮತ್ತು ಧರ್ಮವನ್ನು ಲೆಕ್ಕಿಸದೆ ಮತದಾನದ ಹಕ್ಕುಗಳನ್ನು ಒದಗಿಸಿದ ಸಂವಿಧಾನಗಳಲ್ಲಿ ಭಾರತೀಯ ಸಂವಿಧಾನವೂ ಒಂದಾಗಿದೆ. ಸಂವಿಧಾನವು ಹಿಂದುಳಿದವರ ಹಕ್ಕುಗಳು ಮತ್ತು ಸವಲತ್ತುಗಳ ಬಗ್ಗೆ ಕಾಳಜಿ ವಹಿಸಿದೆ ಮತ್ತು ಹಲವಾರು ಶತಮಾನಗಳಿಂದ ಅವರಿಗೆ ಮಾಡಿದ ಅನ್ಯಾಯವನ್ನು ಸರಿಗೊಳಿಸಲು ತಿದ್ದುಪಡಿ ವಿಧಾನಗಳನ್ನು ಖಾತ್ರಿಪಡಿಸಿದೆ ಎಂದು ಹೇಳಿದರು.

ಎಲ್ಲರಿಗೂ 14 ವರ್ಷದವರೆಗಿನ ಉಚಿತ ಶಿಕ್ಷಣ, ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವುದು, ಪ್ರವೇಶ ಮತ್ತು ಉಚಿತ ಶಿಕ್ಷಣವನ್ನು ಒದಗಿಸಿದ ಶಿಕ್ಷಣ ಹಕ್ಕು (ಆರ್‍ಟಿಇ), ಸಮಾಜದ ದುರ್ಬಲ ವರ್ಗಗಳಿಗೆ ಮತ್ತು ಸರ್ಕಾರಿ ಇಲಾಖೆಗಳಿಂದ ಕಾನೂನು ಮಾಹಿತಿಯನ್ನು ಪಡೆಯಲು ಜನರಿಗೆ ಅಸ್ತ್ರವನ್ನು ಒದಗಿಸಿದ ಮಾಹಿತಿ ಹಕ್ಕು (ಆರ್‍ಟಿಐ) ಸೇರಿದಂತೆ ಜನರ ಹಕ್ಕುಗಳನ್ನು ಬಲಪಡಿಸಲು ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಹಾಗೂ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದಿ, ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಪ್ರಮಾಣ ಮಾಡಿದರು.
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ್ ಮಾತನಾಡಿದರು.

ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಅಧ್ಯಕ್ಷತೆ ವಹಿಸಿದ್ದರು. ಸಮಾಜ ವಿಜ್ಞಾನ ವಿಭಾಗದ ಡೀನ್ ಟಿ ವಿ ಶಿವಾನಂದನ್ ಸ್ವಾಗತಿಸಿದರೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಚೇರಪರ್ಸನ್ ಡಾ. ಸುನೀತಾ ಪಾಟೀಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here