ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಮಾಲರ್ಪಣೆ ಮಾಡಿ ಸಂವಿಧಾನ ದಿನವನ್ನು ಅರ್ಥ ಪೂರ್ಣವಾಗಿ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಓದುವುದರ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಡಾ|| ಅನಿತಾ ಆರ್. ಮಾತನಾಡುತ್ತಾ, ಈ ಸಂವಿಧಾ£ದ ಅಡಿಯಲ್ಲಿ ಬರುವ ಕಾರ್ಯಾಂಗ, ನ್ಯಾಯಾಂಗ ಮತ್ತು ಶ್ಯಾಸಕಾಂಗಕ್ಕೆ ನಾವು ಎಲ್ಲಾರು ಬದ್ಧರಾಗಿ ಒಟ್ಟಾಗಿ ಸಮಾನತೆಯೊಂದಿಗೆ ಭಾತೃತ್ವವನ್ನು ಬೆಳೆಸಿಕೊಳ್ಳುವುದರೊಂದಿಗೆ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿ ಕೋರಿದರು.
ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಪ್ರಭಾರಿ ಅಧೀಕ್ಷಕರಾದ ಬಿ. ಸುರೇಶ, ಸಹಾಯಕ ಅಧೀಕ್ಷಕರಾದ ಚನ್ನಪ್ಪ, ಸಹಾಯಕ ಆಡಳಿತಾಧಿಕಾರಿಯಾದ ಭೀಮಾಶಂಕರ ಡಾಂಗೆ, ಕಛೇರಿ ಅಧೀಕ್ಷಕರಾ ಗುರುಶ್ವೇಶರ ಆರ್, ಶಾಸ್ತ್ರಿ, ಸಂಸ್ಥೆಯ ಜೈಲರ್ಗಳಾದ ಶ್ರೀಮತಿ ಸುನಂದ ವಿ. ಸಾಗರ, ಶಿಕ್ಷಕರಾದ ನಾಗರಾಜ ಮುಲಗೆ ಹಾಗೂ ಕಾರಾಗೃಹ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು.