ಯಾದಗಿರಿ: ಶ್ರೀ ಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್ ಯಾದಗಿರಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರದ ಅತ್ಯುತ್ತಮ ಕೃತಿಗಳಿಗೆ ನೀಡಲಾಗುವ ರಾಜ್ಯಮಟ್ಟದ “ಸಿದ್ಧಶ್ರೀ ಸಾಹಿತ್ಯ ರತ್ನ-2023” ಪ್ರಶಸ್ತಿಗೆ ರಾಜ್ಯದ ಲೇಖಕರಿಂದ ಅರ್ಜಿ ಆಹ್ವಾನಿಸಿದೆ.
ಕನ್ನಡ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಾದ ಕವನ ಸಂಕಲನ, ಕಥಾಸಂಕಲನ, ಪ್ರವಾಸ ಕಥನ, ವೈಚಾರಿಕ ಲೇಖನಗಳು, ನಾಟಕ, ಗಜಲ್ ಸಂಕಲನ, ಕಾದಂಬರಿ, ಹೈಕು ಸಂಕಲನ, ವ್ಯಕ್ತಿ ಚಿತ್ರ, ಆತ್ಮ ಕಥೆ, ಮಕ್ಕಳ ಸಾಹಿತ್ಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿನ ಅತ್ಯುತ್ತಮ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.
ಲೇಖಕರು ತಮ್ಮ ಸ್ವವಿವರದೊಂದಿಗೆ ತಮ್ಮ ಪುಸ್ತಕದ ಮೂರು ಪ್ರತಿಗಳನ್ನು ಜುಲೈ 20ನೇ ದಿನಾಂಕದ ಒಳಗಾಗಿ ಕೋರಿಯರ್ ಅಥವಾ ಅಂಚೆ ಮೂಲಕ ಕಳುಹಿಸುವುದು. (ನಂತರ ಬಂದ ಪುಸ್ತಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.) ಪ್ರಶಸ್ತಿಯು ನಗದು,ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದ್ದು, ಯಾದಗಿರಿ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಸಾಧಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ಪುಸ್ತಕಗಳಲ್ಲದೇ ಸುಮಾರು ಹತ್ತು ಉತ್ತಮ ಕೃತಿಗಳಿಗೆ ಮೆಚ್ಚುಗೆ ಪತ್ರ ಹಾಗೂ ಸ್ಮರಣಿಕೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುಸ್ತಕಗಳನ್ನು ಕಳುಹಿಸುವ ವಿಳಾಸ: ನಿರ್ದೇಶಕರು ಶ್ರೀ ಸಿದ್ಧಸಂಪದ ಚಾರಿಟೇಬಲ್ ಟ್ರಸ್ಟ್ (ರಿ) , ಗುಡ್ ಲಕ್ ಕಂಪ್ಯೂಟರ್ ಸೆಂಟರ್, ಎಸ್.ಎಲ್.ವಿ.ಲಾಡ್ಜ್ ಹಿಂದುಗಡೆ, ಚಿತ್ತಾಪುರ ರಸ್ತೆಯಾದಗಿರಿ- 585202. ಹೆಚ್ಚಿನ ಮಾಹಿತಿಗಾಗಿ: 9886065902, 7406125555