ಶಾಂತಿ ಸಭೆ; ಬಕ್ರೀದ್ ಹಬ್ಬ ಸೌಹಾರ್ದತೆಯಿಂದ ಆಚರಿಸಿ | ರಾಘವೇಂದ್ರ

0
17

ಶಹಾಬಾದ: ಬಕ್ರೀದ್ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪೊಲೀಸ್ ಠಾಣೆಯಲ್ಲಿ ರವಿವಾರ ಪಿಐ ರಾಘವೇಂದ್ರ.ಎಸ್.ಹೆಚ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ನಗರ ಪೊಲೀಸ್ ಠಾಣೆಯ ಪಿಐ ರಾಘವೇಂದ್ರ.ಎಸ್.ಹೆಚ್, ಹಬ್ಬಗಳ ಆಚರಣೆ ಸಮಾಜದ ಎಲ್ಲರಲ್ಲೂ ಸಾಮರಸ್ಯೆ ಮೂಡಿಸಬೇಕು.ಒಬ್ಬರಿಗೊಬ್ಬರಿಗೂ ಸಹಕಾರಯುತವಾಗಿ ನಡೆದುಕೊಂಡು ಆಚರಿಸಬೇಕು. ಎಂದರಲ್ಲದೇ, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದರೀತಿ ಹಬ್ಬದ ಆಚರಣೆ ಶಾಂತರೀತಿಯಲ್ಲಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.

Contact Your\'s Advertisement; 9902492681

ಹಬ್ಬದ ಸಮಯದಲ್ಲಿ ಶಾಂತಿಗೆ ಭಂಗ ತರುವ ಯಾವುದೇ ಹೇಳಿಕೆ ನೀಡುವುದು, ಸಾಮಾಜಿಕ ಜಾಲ ತಾಣಗಳಲ್ಲಿ ಪೆÇೀಸ್ಟ್ ಮಾಡುವುದು, ಫಾರ್ವಡ್ ಮಾಡಿ ಮತ್ತೊಬ್ಬರಿಗೆ ನೋವುಂಟು ಮಾಡುವುದು, ಕಾನೂನಿನಲ್ಲಿ ಅಪರಾಧವಾಗಲಿದೆ.ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಹಿತಕರ ಘಟನೆ ನಡೆಯದಂತೆ ಪೆÇಲೀಸರು ಕಠಿಣ ಕ್ರಮಕೈಗೊಳ್ಳಲಿದೆ ಎಂದರು.

ಹಿರಿಯ ಮುಖಂಡರಾದ ಡಾ.ರಶೀದ್ ಮರ್ಚಂಟ್ ಮಾತನಾಡಿ, ಹಬ್ಬಗಳು ಸಮಾಜದಲ್ಲಿ ಸಂತೋಷ ತರುವ ಕ್ಷಣಗಳು. ಅದನ್ನು ಎಲ್ಲಾ ಧರ್ಮಿಯರು ಎಲ್ಲರೂ ಕೂಡಿಕೊಂಡು ಸಾಮರಸ್ಯದಿಂದ ಆಚರಿಸಬೇಕು. ಯಾವುದೇ ರೀತಿಯ ಸಮಸ್ಯೆ ಇದ್ದರೂ ಅದನ್ನು ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಹೇಳಿದರು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ವ್ಯಕ್ತಿಯಾಗಿರಲಿ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ಶಿವರಾಜ ಕೋರೆ, ಸದಾನಂದ ಕುಂಬಾರ, ಕೃಷ್ಣಪ್ಪ ಕರಣಿಕ, ಮಹ್ಮದ ಮಸ್ತಾನ್, ಹಾಷಮ ಖಾನ್, ಗೋವಿಂದ ಕುಸಾಳೆ, ಮಹ್ಮದ ಇಮ್ರಾನ್, ಉದಯ ನಂದಗೌಳಿ, ಮಹ್ಮದ ಅಜರ, ಬಸವರಾಜ ಸಾತ್ಯಾಳ, ಪೆÇೀಲೀಸ್ ಸಿಬ್ಬಂದಿ ಗಳಾದ ಎಎಸಐ ಶ್ರೀಕಾಂತ್, ನಿಂಗಣ್ಣಗೌಡ, ಬಸವರಾಜ ಮಡಿವಾಳ, ಪರಶುರಾಮ, ಮಾಳಪ್ಪ ಪೂಜಾರಿ, ನಗರ ಸಭೆಯ ಸಿಬ್ಬಂದಿ ಗಳಾದ ಉನ್ನೇಶ ದೊಡ್ಡಮನಿ, ಅನಿಲ ಹೊನಗುಂಟಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here