ಕಲಬುರಗಿ: ಬೆಂಗಳೂರಿನ ಗಾಂಧಿನಗರದ ಫೋರ್ಚ್ಯೂನ್ ಪಾರ್ಕ್ ಜೆಪಿ ಕ್ರಿಸ್ಟಲ್ ಸಭಾಂಗಣದಲ್ಲಿ ರವಿವಾರದಂದು ಐಕಾನ್ಸ್ ಆಫ್ ಇಂಡಿಯನ್ ಬಿಜ್ನೆಸ್ ಮ್ಯಾಗ್ಜಿನ್ ವತಿಯಿಂದ ಏರ್ಪಡಿಸಿದ ಸಮಾರಂಭದಲ್ಲಿ ಕಂಪ್ಯೂಟರ್ ತರಬೇತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಸುಸಜ್ಜಿತ್ ಕಲಬುರಗಿ ನಗರದ ರೆಡ್ಡಿ ಇನ್ಸಿಟ್ಯೂಟ್ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿದೇಶಕರಾದ ಶಾಂತರೆಡ್ಡಿ ಪೇಠಶಿರೂರ ಅವರನ್ನು ಕರ್ನಾಟಕ ಗ್ಲೋರಿ-೨೦೨೩ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಎಮ್‌ಎಸ್‌ಎಂಈನ ಪ್ರಧಾನ ನಿರ್ದೇಶಕರಾದ ಜೈರಾಜ ಶ್ರೀನಿವಾಸ, ಖ್ಯಾತ ಶಸ್ತ್ರ ಚಿಕಿತ್ಸಕರು ಹಾಗೂ ರಾಜ್ಯ ವಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಟಿ.ಎಂ. ಆಂಜನೇಯಪ್ಪ, ಹೈಟೆಕ್ ಮ್ಯಾಗ್ನೆಟಿಸ್ ಮತ್ತು ಎಲೆಟ್ರ್ರಾನಿಕ್ಸ್ ಎಂ.ಡಿ. ಹಾಗೂ ಫಿಕ್ಕಿ ಯ ಅಂತರ್ ರಾಷ್ಟ್ರೀಯ ವ್ಯವಹಾರಗಳ ಚೇರ್‌ಪರ್ಸ್‌ನ್ ಉಮಾರೆಡ್ಡಿ, ವಿಸ್ತಾರ ನ್ಯೂಸ್‌ನ ಉಪಾಧ್ಯಕ್ಷ ನವನೀತ್, ಯುಕೋ ಬ್ಯಾಂಕ್ ಪ್ರಾದೇಶಿಕ ಡಿಜಿಎಂ ಮನೋಜಕುಮಾರ ಸುಹಾಸ, ಲೇದರ್ ಕ್ರಿಯೇಷನ್ಸ್ ನ ಸಿಇಓ ಡಾ. ವಿನೋದ ಶ್ರೀವಾಸ್ತವ, ಗ್ಲೋಬಲ್ ಪಿಸಿಸಿಎಸ್‌ನ ಸಂಸ್ಥಾಪಕ ಪ್ರಭಾಕರ, ಖ್ಯಾತ ಚಿತ್ರತಾರೆ ರೂಪಿಕಾ ಹಾಗೂ ಇತರರು ಇದ್ದರು.