ಕಲಬುರಗಿ: ಪ್ರಯಾಣಿಕರು ಯಾವ ಊರಿಗೆ ಹೋಗಬೇಕು ಎಂಬುವುದು ಮೊದಲೇ ನಿರ್ಧರಿಸಿದಂತೆ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧನೆ ಎಂಬ ಮೆಟ್ಟಿಲು ಹತ್ತುವ ಮೂಲಕ ಗುರಿ ತಲುಪಬೇಕು ಎಂದು ಕಮಲಪೂರ ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲರಾದ ಶಾಂತಾ ಬಿ.ಅಷ್ಟಗಿ ಅವರು ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ದಾಮೋದರ ರಘೋಜಿ ಪಿಯುಸಿ ಕಾಲೇಜು ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಸ್ನೇಹ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಮ್ಮಜೀವನದ ಶಿಲ್ಪಿಗಳು ಆಗಿದ್ದು, ನೀವು ಹೊಂದುವ ಎತ್ತರದ ಗುರಿಯನ್ನು ತಲುಪಲು ಶಮಿಸಬೇಕು ಎಂದ ಅವರು, ತಾವು ಎತ್ತರಕ್ಕೆ ಬೆಳೆಯಬೇಕೋ ಕಂದರಕ್ಕೆ ಬಿಳಬೇಕೊ ಅದು ನಿಮ್ಮ ಕೈಯಲ್ಲಿದೆ ಎಂಬ ಸತ್ಯವನ್ನು ಅರಿತುಕೊಂಡು ತಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಬೇಕು ಎಂದರು.
ಶ್ರೀ ದಾಮೋದರ ರಘೋಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳುನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವುದು ಸಂತಸದ ವಿಷಯ, ಈ ಸಂಸ್ಥೆ ಸಂಸ್ಥಾಪಕರು ಇಲ್ಲಿನ ಮಕ್ಕಳಿಗೆ ಶೈಕ್ಷಣಿಕ, ದಾಸೋಹ ನೀಡುವ ಉದ್ದೇಶವನ್ನು ಹೊಂದಿದ್ದಾರೆ ಹೀಗಾಗಿ ಈ ಕಾಲೇಜಿನಲ್ಲಿ 600 ಜನ ವಿದ್ಯಾರ್ಥಿಗಳು ಓದುತ್ತಿರುವುದೇ ಸಾಕ್ಷಿಎಂದರು.
ಸಂಸ್ಥೆಯ ಟ್ರಸ್ಟಿಗಳಾದ ಕುಮಾರಿ ನಂದಿನಿ ಆರ್.ರಘೋಜಿ ಅವರು, ಯುಕೆ ಲಂಡನ್ ನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮೂಗಿಸಿಕೊಂಡು ಅಲ್ಲಿಯೇ ಉದ್ಯೋಗ ಅರಸಬಹುದಿತ್ತು. ಆದರೇ ತಾಯಿನಾಡಿನ ಸೇವೆಗಾಗಿ ಇಲ್ಲಿನ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಅವರ ಈ ಸೇವೆ ಶ್ಲಾಘನೀಯ ಎಂದ ಅವರು, ಸಂಸ್ಥೆ ಕಾರ್ಯದರ್ಶಿ ಮೀರಾ ಆರ್.ರಘೋಜಿ ಅವರ ಹುಟ್ಟು ಹಬ್ಬದ ಶುಭ ದಿನವಾದ ಇಂದು ವಿದ್ಯಾರ್ಥಿಗಳ ಸಂಭ್ರಮದ ದಿನವನ್ನಾಗಿಸಿ ಅವರೊಂದಿಗೆ ಸಂತಸ ಹಂಚಿಕೊಳ್ಳುತ್ತಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರಾದ ರಾಮಚಂದ್ರ ಡಿ.ರಘೋಜಿ ವಹಿಸಿದ್ದರು. ಕಾರ್ಯದರ್ಶಿ ಮೀರಾ ಆರ್. ರಘೋಜಿ, ಟ್ರಸ್ಟಿ ಕುಮಾರಿ ನಂದಿನಿ ಆರ್.ರಘೋಜಿ, ಕ್ಯಾಂಪಸ ಸಂಯೋಜಕ ಸುಭಾಶ್ಚಂದ್ರ ಕೆ.ಗಾದಾ, ಪಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಕೆ.ಕಣ್ಣಿ ಸೇರಿದಂತೆ ಹಲವರಿದ್ದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಉಡುಗೋರೆಗಳನ್ನು ನೀಡುವ ಮೂಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ವಾಗತಿಸಿಕೊಂಡರು. ನಂತರ ಸಾಂಸ್ಕøತಿಕ ಜರುಗಿದವು ಕಾರ್ಯಕ್ರಮಗಳು ಜರುಗಿದವು.