ಆಂದೋಲಾ ಶ್ರೀಗಳ ಮಾತು ದೆವ್ವದ ಬಾಯಿಯಲ್ಲಿ ಭಗವತ್ ಗೀತೆ ಹೇಳಿದಂತೆ

0
43

ಚಿತ್ತಾಪುರ:ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ. ಪಾಟೀಲ್ ಅವರ ಬಗ್ಗೆ ಶ್ರೀ ರಾಮಸೇನೆ ರಾಜ್ಯಾಧ್ಯಕ್ಷರಾದ ಆಂದೋಲಾದ ಸಿದ್ದಲಿಂಗ ಸ್ವಾಮಿಜಯವರ ಮಾತನಾಡಿರುವುದು ನೋಡಿದರೆ ದೆವ್ವದ ಬಾಯಿಯಲ್ಲಿ ಭಗವತ್ ಗೀತೆ ಹೇಳಿದಂತಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಹೇಳಿದ್ದಾರೆ.

ಗುರುವಾರ ಪತ್ರಿಕೆ ಪ್ರಕಟಣೆ ನೀಡಿದ ಅವರು ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯದ ಪ್ರತಿಷ್ಠಿತ ಲಿಂಗಾಯತ ನಾಯಕರಲ್ಲಿ ಒಬ್ಬ ಉತ್ತಮ ನಾಯಕರು,ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಂದೇ ಭಾವನೆಯಿಂದ ನೋಡಿಕೊಂಡು ರಾಜ್ಯ ನಾಯಕರೆನಿಸಿಕೊಂಡಿದ್ದಾರೆ. ಅಂತಹವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಲಬುರ್ಗಿ ಜಿಲ್ಲೆಯಲ್ಲಿ ಯಾವುದೇ ಜಾತಿ ಧರ್ಮದ ಹೆಸರಲ್ಲಿ ಅಹಿತಕರ ಘಟನೆಗಳು ನಡೆದಿಲ್ಲಾ. ಕೋಮುವಾದಿ ಸಿದ್ದಲಿಂಗ ಸ್ವಾಮಿಜಿಯ ಮಾತುಗಳಿಂದ ಇತ್ತಿಚೆಗೆ ಆಳಂದದಲ್ಲಿ ಸಹೋದರರಂತೆ ಬಾಳುತ್ತಿರುವ ಜನರಲ್ಲಿ ಹಿಂದೂ ಮುಸ್ಲಿಂ ಎಂಬ ಜಾತಿ ಧರ್ಮದ ವಿಷ ಬೀಜ ಬಿತ್ತಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಯವರ ಎದುರೆ ಜನರು ಒಬ್ಬರಿಗೊಬ್ಬರು ಹೊಡೆದಾಡುವ ಹಂತಕ್ಕೆ ವಾತಾವರಣ ಸೃಷ್ಟಿಯಾಗಿತ್ತು.ಸ್ವಾಮೀಜಿಗಳು ಸಮಾಜದಲ್ಲಿ ಶಾಂತಿ ನೆಲೆಸುವ ಕೆಲಸ ಮಾಡಬೇಕು ಅಶಾಂತಿ ಹಾಗೂ ವಿಷ ಬೀಜ ಬಿತ್ತುವ ಕೆಲಸ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನಡೆಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಒಂದು ಸಂಘಟನೆಗಳ ವಿರುದ್ಧ ಕಿಡಿಕಾರಿದ್ದಾರೆ ಎಂದು ಆಪಾದಿಸಿದ್ದಾರೆ, ಆದರೆ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಹೇಳಿರುವುದು ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಇರಲಿ,ಯಾವುದೇ ಸಂಘಟನೆಯವರೆ ಇರಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಹಾಗೂ ಕಾನೂನುನ್ನು ಕೈಗೆ ತೆಗೆದುಕೊಂಡಿದರೆ ಅವರಿಗೆ ಜೈಲಿಗಟ್ಟಿ ಎಂದಿರುವುದು ತಪ್ಪೇನಿಲ್ಲ.ಚಿತ್ತಾಪೂರ ಮತಕ್ಷೇತ್ರ ಸರ್ವ ಜನಾಂಗದ ಶಾಂತಿಯ ತೋಟ ಇನ್ನೂವರೆಗೂ ಯಾವುದೇ ಜಾತಿ ನಿಂದನೆ ಕೇಸು ದಾಖಲಾಗಿಲ್ಲ. ಸಿದ್ಧಲಿಂಗ ಸ್ವಾಮಿಜಿಗಳು ಇದನ್ನು ಅರ್ಥ ಮಾಡಿಕೊಳ್ಳಲ್ಲಿ,ಪ್ರಿಯಾಂಕ್ ಖರ್ಗೆ ಅಧಿಕಾರ ಬಂದ ಮೇಲೆ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರೀಯಾಂಕ್ ಖರ್ಗೆ ಹುಲಿ ಇದ್ದ ಹಾಗೆ ಅಧಿಕಾರ ಇರಲಿ, ಇರದೆ ಇರಲಿ ಅವರು ಗರ್ಜಿಸುವುದು ಯಾರಿಂದ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಆಂದೋಲಾ ಶ್ರೀಗಳು ಈ ತರ ಹಗುರವಾಗಿ ಮಾತನಾಡುವುದು ಸರಿಯಲ್ಲ,ಈಗಲಾದರೂ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಅರ್ಥ ಮಾಡಿಕೊಂಡು ಮಾತನಾಡುವುದು ಕಲಿಯಬೇಕು ಎಂದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here