ಪುನರ್ಜನ್ಮ ನೀಡುವ ವೈದ್ಯರು ದೇವರಿಗೆ ಸಮಾನ

0
23

ಕಲಬುರಗಿ: ಕಠಿಣ ಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸಿ, ಸೂಕ್ತ ಚಿಕಿತ್ಸೆ ನೀಡಿ ರೋಗಿಗೆ ಪುನರ್ಜನ್ಮ ನೀಡುವ ವೈದ್ಯರು ದೇವರಿಗೆ ಸಮಾನ ಎಂದು ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.

ಅವರು ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ವಿಶ್ವನಾಥ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚಾರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ, ಭಾಗವಹಿಸಿ ಮಾತನಾಡಿದ ಅವರು  ವೈದ್ಯಕೀಯ ವೃತ್ತಿ ಎನ್ನುವುದು ಅತ್ಯಂತ ಪವಿತ್ರವಾದದ್ದು. ಕಷ್ಟಕರ ಸನ್ನಿವೇಶದಲ್ಲಿ ಸಮಚಿತ್ತವನ್ನು ಕಾಪಾಡಿಕೊಂಡು ರೋಗಿಗಳ ಜೀವ ಉಳಿಸುವ ಅತ್ಯಂತ ಜವಾಬ್ದಾರಿಯುತ ಕಾರ್ಯವನ್ನು ಸಮಾಜದಲ್ಲಿ ವೈದ್ಯರು ನಿರ್ವಹಿಸುತ್ತಿದ್ದಾರೆ.

Contact Your\'s Advertisement; 9902492681

ಎಷ್ಟೇ ಒತ್ತಡದಲ್ಲಿ ಕೆಲಸ ಮಾಡಿದರೂ ತಾವು ಚಿಕಿತ್ಸೆ ನೀಡಿದ ರೋಗಿ ಆರೋಗ್ಯಕರವಾಗಿ ಓಡಾಡುವುದನ್ನು ನೋಡಿದರೆ ಸಾಕು ವೈದ್ಯರು ಸಂತೃಪ್ತಿ ಹೊಂದುತ್ತಾರೆ. ಜೀವನದಲ್ಲಿ ಮುಖ್ಯವಾದದ್ದು ಆರೋಗ್ಯವೇ ಹೊರತು, ಹಣವಲ್ಲ. ವೈದ್ಯರಾದವರಿಗೆ ಕರುಣೆ ಮಾತ್ರ ಮುಖ್ಯವಲ್ಲ. ಸಹಾನುಭೂತಿಯೂ ಅಷ್ಟೇ ಮುಖ್ಯ. ರೋಗಿಗಳ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಮಾಜದಲ್ಲಿ ವೈದ್ಯರಿಗೆ ಬೆಲೆ ಸಿಗುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮೊದಲು ರೋಗಿಗಳ ಆರೋಗ್ಯ ಸಮಸ್ಯೆಗಳನ್ನು ಆಲಿಸಿ ಉತ್ತಮ ಚಿಕಿತ್ಸೆ ನೀಡಬೇಕು.

ವೈದ್ಯರು ವಾಣಿಜೋದ್ದೇಶಕ್ಕಾಗಿ ಆರೋಗ್ಯ ಸೇವೆ ನೀಡದೇ ಜನರ ಆರೋಗ್ಯ ದೃಷ್ಟಿಯಿಂದ ಸೇವೆ ನೀಡುವ ಮನೋಭಾವ ಹೊಂದಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಿದ್ದು, ಧನುಷ್, ವಿನಾಯಕ, ಬಿಂದುಶ್ರೀ ಸೇರಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here