ಕೋವಿಡ್‍ ಕ್ಕಿಂತಲೂ ಮುಂಚೆ ನಿಲ್ಲುತ್ತಿದ್ದ ರೈಲುಗಳ ನಿಲುಗಡೆಗೆ ಆಗ್ರಹ

0
94

ಶಹಾಬಾದ: ಕೋವಿಡ್‍ಕ್ಕಿಂತಲೂ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ನಿಲ್ಲಬೇಕು ಆಗ್ರಹಿಸಿ ಶನಿವಾರ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ ನಿಯೋಗವು ಹೆಚ್ಚುವರಿ ಜಿಲ್ಲಾಧಿಕಾರಿ ರಾಚಪ್ಪ ಅವರ ಮುಖಾಂತರ ಕೇಂದ್ರ ರೇಲ್ವೆ ಹಿರಿಯ ಅಧಿಕಾರಿ ಅಶ್ವಿನಿ ವೈಷ್ಣವ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ ಗೌರಾವಾಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಹಾಗೂ ಸಮಿತಿಯ ಅಧ್ಯಕ್ಷ ಮಹ್ಮದ್ ಉಬೆದುಲ್ಲಾ ಮಾತನಾಡಿ, ಕೋವಿಡ್ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ಹಠಾತನೇ ನಿಲ್ಲಿಸಿ ರೇಲ್ವೆ ಇಲಾಖೆ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಮಾಡುತ್ತಿದೆ.ಶಹಾಬಾದ ತಾಲೂಕಿನ ಗ್ರಾಮಗಳಾದ ಮರತೂರ ಹಾಗೂ ನಂದೂರ ಚಿಕ್ಕ ರೇಲ್ವೆ ನಿಲ್ದಾಣದಲ್ಲಿ ಕೆಲವು ರೇಲ್ವೆಗಳು ನಿಲುಗಡೆಯಾಗುತ್ತಿವೆ. ಆದರೆ ತಾಲೂಕಾ ಕೇಂದ್ರವಾದ ಶಹಾಬಾದ ರೇಲ್ವೆ ನಿಲ್ದಾಣದಲ್ಲಿ ರೇಲ್ವೆಗಳು ನಿಲ್ಲುತ್ತಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ.ಈ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದರೂ, ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಇಲ್ಲಿನ ಜನಪ್ರತಿನಿಧಿಗಳು ಹೋರಾಟಗಾರರು ಒತ್ತಾಯ ಮಾಡಿದಾಗ ಮಾತ್ರ ಅಧಿಕಾರಿಗಳಿಗೆ ಬೇಟಿಯಾಗಲು ಬರುತ್ತಾರೆ.ಆದರೆ ಸಾರ್ವನಿಕರ ಹಿತದೃಷ್ಟಿಯಿಂದ ಎಂದು ರೇಲ್ವೆ ನಿಲುಗಡೆ ಮಾಡಲೂ ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರತಿಭಟನೆ ಮಾಡಿದಾಗ ಕೆಲವು ರೈಲುಗಳನ್ನು ನಿಲ್ಲಿಸುವ ಭರವಸೆ ನೀಡಿ ಮತ್ತೆ 2-3 ತಿಂಗಳಲ್ಲಿ ಮತ್ತೆ ಆದೇಶವನ್ನು ಹಿಂಪಡೆದಿದ್ದಾರೆ. ನಗರದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ.ಇಲ್ಲಿನ ಜನರಿಗೆ ಕಲಬುರಗಿಗೆ, ಸೋಲಾಪೂರಗೆ ಹೋಗಲೂ ತೊಂದರೆಯಾಗುತ್ತಿದೆ. ನೌಕರಸ್ಥರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಕೇವಲ ಕಡಿಮೆ ಜನಸಂಖ್ಯೆ ಹೊಂದಿರುವ ಚಿತ್ತಾಪೂರ ರೇಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗುತ್ತಿದೆ.

ಅದೇ ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ರೈಲು ನಿಲುಗಡೆಯಾಗುತ್ತಿಲ್ಲ. ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕ,ಸಂಸದರಿಗೆ ಮನವಿ ಸಲ್ಲಿಸಿದ್ದೆವೆ.ಆದರೂ ಯಾವುದೇ ಕ್ರಮಕೈಗೊಂಡಿಲ್ಲ.ಆದ್ದರಿಂದ ಕೂಡಲೇ ರೈಲು ನಿಲ್ಲಿಸಲು ಕ್ರಮಕೈಗೊಳ್ಳಬೇಕು.ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಾಬುರಾವ ಪಂಚಾಳ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here