ಕಲಬುರಗಿ: ಎಂಜಿನಿಯರಿಂಗ್ ಕೋರ್ಸ್‍ಗಳ ಪೈಕಿ ಕಂಪ್ಯೂಟರ್ ಸೈನ್ಸ್ ಈ ವರ್ಷ ಕೂಡ ಹೆಚ್ಚು ಸದ್ದು ಮಾಡುತ್ತಿದೆ ಎಂದು ತೋಂಟದಾರ್ಯ ಎಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸೈನ್ಸ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ವಿಜಯಕುಮಾರ ಮಾಲಗಿತ್ತಿ ಹೇಳಿದರು.
ಅವರು ಎಂಜಿನಿಯರಿಂಗ್ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ದೇವಿಂದ್ರಪ್ಪ ವಿಶ್ವಕರ್ಮ ಅವರು ನಡೆಸಿದ ವಿಶೇಷ ಫೋನ್‍ಇನ್ ಕಾರ್ಯಕ್ರಮದ ಸಂದರ್ಶನದಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್ ನವ ತಂತ್ರಜ್ಞಾನದ ಕೋರ್ಸ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಸಿಎಸ್, ಎಐ, ಎಂಎಲ್ ಕೋರ್ಸ್ ಕಲಿಯಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದಾರೆ. ಈಗಾಗಲೇ ಮ್ಯಾನೆಜ್‍ಮೆಂಟ್ ಕೋಟಾದ ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಷಯವನ್ನೇ ಮೊದಲ ಆದ್ಯತೆಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕೃತಕ ಬುದ್ಧಿಮತ್ಯೆ (ಎಐ), ಮಷಿನ್ ಲರ್ನಿಂಗ್(ಎಂಐ) ನಂತಹ ಹೊಸ ತಂತ್ರಜ್ಞಾನ ಕೋರ್ಸ್‍ಗಳು ಸೇರಿಕೊಂಡಿವೆ.
ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಡಿಯಲ್ಲಿ 205 ಎಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿವರ್ಷ 70 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಹೊಸ ಕೋರ್ಸ್‍ಗಳಿಗೆ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯು ಇನ್‍ಟೆಕ್ ಪ್ರಮಾಣವನ್ನು ಹೆಚ್ಚಳ ಮಾಡಿತ್ತು. ಹಾಗೆ ನೋಡಿದರೆ, 2021-2022 ರಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗಿದ್ದ ಸೀಟುಗಳನ್ನು 2023-2024 ನೇ ಸಾಲಿಗೆ ಏರಿಕೆ ಮಾಡಲಾಗಿದೆ.
ಅದೇ ರೀತಿ, ಎಐ ಮತ್ತು ಎಂಐ ಕೋರ್ಸ್‍ಗೆ ಸೀಟುಗಳನ್ನು ಏರಿಕೆ ಮಾಡಿತು. ಕಂಪ್ಯೂಟರ್ ಸೈನ್ಸ್-ಡಾಟಾ ಸೈನ್ಸ್ ಕೂಡ ಸೀಟುಗಳು ಹೆಚ್ಚಳವಾಗಿವೆ. ಮೊದಲೆಲ್ಲಾ ಎಂಜಿನಿಯರಿಂಗ್ ಅಂದರೆ ಮೆಕ್ಯಾನಿಕಲ್ ಮತ್ತು ಸಿವಿಲ್ ಕೋರ್ಸ್‍ಗಳನ್ನೇ ಹೆಚ್ಚು ಬಿಂಬಿಸಲಾಗುತ್ತಿತ್ತು. ಆದರೆ, ಈಗ ತಂತ್ರಜ್ಞಾನ ಬೆಳವಣಿಗೆಯಾಗಿದ್ದು, ವಿವಿಧ ಕೋರ್ಸ್‍ಗಳು ಉಗಮವಾಗಿವೆ. ಅದರಲ್ಲೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ಈಗಾಗಲೇ ಕಂಪ್ಯೂಟರ್ ಸೈನ್ಸ್ ಮತ್ತು ಎಐ, ಎಂಐ ಹೆಚ್ಚು ಸದ್ದು ಮಾಡುತ್ತಿವೆ. ಸಾಮಾನ್ಯ ಪದವಿಗಿಂತ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು ಇರುವವರಿಗೆ ಉದ್ಯೋಗವಕಾಶಗಳು ಹೆಚ್ಚಾಗಿವೆ. ಇದನ್ನು ಅರಿತು ಎಂಜಿನಿಯರಿಂಗ್ ಕಾಲೇಜುಗಳು ಸಹ ತಂತ್ರಜ್ಞಾನ ಆಧಾರಿತ ಕೋರ್ಸ್‍ಗಳನ್ನು ಕಾಲೇಜುಗಳಲ್ಲಿ ಪರಿಚಯಿಸುತ್ತಿವೆ.
ಕಳೆದ ಎರಡು ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ಕೋರ್ಸ್‍ಗೆ ಹೆಚ್ಚಿನ ಬೇಡಿಕೆ ಇದೆ. ಇನ್ನೀತರ ಕಂಪ್ಯೂಟರ್ ಸೈನ್ಸ್ ಕೋರ್ಸ್‍ಗಳ ಕಡೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈ ಹೊಸ ತಂತ್ರಜ್ಞಾನವನ್ನು ಆಯಾ ವಿಷಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ಹೀಗಾಗಿ, ಪ್ರತ್ಯೇಕವಾಗಿ ಹೊಸ ತಂತ್ರಜ್ಞಾನದ ಕೋರ್ಸ್‍ಗಳಿಗೆ ಬೇಡಿಕೆಯಿದೆ ಎಂದು ಗಣಕ ವಿಜ್ಞಾನಿ ಪ್ರೊಫೆಸರ್ ವಿಜಯಕುಮಾರ ಮಾಲಗಿತ್ತಿ ಹೇಳಿದರು.