ಕಲಬುರಗಿ; ರೇವಣಸಿದ್ದಪ್ಪ ಜೀವಣಗಿ ಅವರು ಸುಮಾರು 40 ವರ್ಷಗಳ ಕಾಲ ಸೈನಿಕನಾಗಿ ದೇಶ ಸೇವೆಗಾಗಿ ಮಾಡಿ ಬಂದು ಸುಮಾರು 15 ವರ್ಷಗಳಿಂದ ಪ್ರಗತಿ ಕಾಲೋನಿಯ ವಚನೋತ್ಸವ ಸಮಿತಿಯ ಸಂಚಾಲಕರಾಗಿ ಪ್ರತಿ ವಾರಕ್ಕೊಮ್ಮೆ ಮನೆ ಮನೆಗೆ ಹೋಗಿ ವಚನೋತ್ಸವ ಕಾರ್ಯಕ್ರಮ ಮಾಡುವ ಮೂಲಕ ವಚನಗಳು ಮತ್ತು ವಚನ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯವಾದದು.
ಜುಲೈ 02ರಂದು ವಚನ ಪಿತಾಮಹಾ ಪ.ಗು ಹಳಕಟ್ಟಿ ಅವರ ಜಯಂತೋತ್ಸವ ನಿಮಿತ್ಯ ಹಳಕಟ್ಟಿಯವರು ತಮ್ಮ ಜೀವನವನ್ನೆ ಹರಿದು ಹಂಚಿ ವಚನಗಳು ಸಾಹಿತ್ಯವನ್ನು ಸಂರಕ್ಷಿಸಿ, ಮರು ಮುದ್ರಿಸಿ ಸಂರಕ್ಷಿಸುವಲ್ಲಿ ಅವರು ಪಟ್ಟಿದ ಕಷ್ಟ ಅಷ್ಟಿಷ್ಟಲ್ಲ ಅಂತಹ ವಚನ ಸಾಹಿತ್ಯವನ್ನು ಪ್ರಚಾರ ಮಾಡುವ ಕಾರ್ಯ ಮಾಡುತ್ತಿರುವ ರೇವಣಸಿದ್ದಪ್ಪ ಜೀವಣಗಿ ಅವರಿಗೆ ಅವರ ಹುಟ್ಟುಹಬ್ಬದ ಕಾರಣ ಡಾ. ಪ.ಗು ಹಳಕಟ್ಟಿ ಅವರ ಭಾವಚಿತ್ರವನ್ನೆ ಉಡುಗೋರೆಯಾಗಿ ಕೊಡುವ ಮೂಲಕ ಹಳಕಟ್ಟಿಯವರ ಜಯಂತೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಮಾತನಾಡಿದರು.
ಮಲ್ಲಿಕಾರ್ಜುನ ತರುಣ ಸಂಘದ ಉಪಾಧ್ಯಕ್ಷರಾದ ವಿರೇಶ ನಾಗಶೆಟ್ಟಿ ಹಾಗು ಪದಾಧಿಕಾರಿಗಳಾದ ಅಮಿತ ಜೀವಣಗಿ, ಶಶಿಧರ ಪ್ಯಾಟಿ, ಸಂಜುಕುಮಾರ ತಂಬಾಕೆ, ಸೋನು ಜೀವಣಗಿ ಹಾಗು ಇತರರು ಉಪಸ್ಥಿತರಿದ್ದರು.