ಮಾರ್ಕ್ಸ್ ವಾದ ಮಾನವ ಜೀವನ ವಿಧಾನ: ಮಹೇಶ

0
114

ವಾಡಿ: ಮಾರ್ಕ್ಸ್ ವಾದ ಕೇವಲ ರಾಜಕೀಯ ಸಿದ್ಧಾಂತವಲ್ಲ. ಅದೊಂದು ಮಾನವ ಜೀವನ ವಿಧಾನವಾಗಿದೆ ಎಂದು ಆಲ್ ಇಂಡಿಯಾ ಕಿಸಾನ್ ಕೇತ್ ಮಜ್ದೂರ್ ಸಮಘಟನೆ (ಎಐಕೆಕೆಎಂಎಸ್) ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ ಹೇಳಿದರು.

ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ವತಿಯಿಂದ ರವಿವಾರ ಲಾಡ್ಲಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮಹಾನ್ ಮಾರ್ಕ್ಸ್ ವಾದಿ ಚಿಂತಕ, ಎಸಿಯುಸಿಐ ಸಂಸ್ಥಾಪಕ ಅಧ್ಯಕ್ಷ ಕಾಮ್ರೇಡ್ ಶಿವದಾಸ್ ಘೋμï ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಬಡತನವಿಲ್ಲದ, ನಿರುದ್ಯೋಗ ಸಮಸ್ಯೆಯಿಲ್ಲದ ಶ್ರೇಷ್ಠ ಸಮಾಜವಾದಿ ವ್ಯವಸ್ಥೆ ನಿರ್ಮಾಣ ಮಾಡುವ ಉದ್ದೇಶವಿರುವ ಇಂಥ  ಮಾರ್ಕ್ಸ್ ವಾದಿ ಚಿಂತನೆಯನ್ನು ದೇಶದ ಜನತೆ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಕಾರ್ಮಿಕ ವರ್ಗ ಸಂಸ್ಕøತಿ ಬೆಳೆಸಿಕೊಂಡು ಶೋಷಿತರ ವಿಮುಕ್ತಿಗೆ ಬದ್ಧರಾಗಬೇಕು ಎಂದರು.

ಲೆನಿನ್, ಸ್ಟಾಲಿನ್ ಮತ್ತು ಮಾವೋ ಜೆಡಾಂಗ್ ನಂತರ ಅಂತಾರಾಷ್ಟೀಯ ಮಟ್ಟದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಶಿವದಾಸ್ ಘೋμï ನೀಡಿದ ಕೊಡುಗೆ ಅತ್ಯಂತ ದೊಡ್ಡ ಪ್ರಮಾಣದಲ್ಲಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಮ್ಯುನಿಸ್ಟ್ ಚಳವಳಿಗಳು ಶಿವದಾಸ್ ಘೋμïರ ಚಿಂತನೆಗಳಿಲ್ಲದೆ ಇಂದು ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ. ಜಗತ್ತಿನಾದ್ಯಂತ ಬಂಡವಾಳಶಾಹಿಗಳ ಕುತಂತ್ರದಿಂದಾಗಿ ಕಮ್ಯುನಿಸ್ಟ್ ಚಿಂತನೆಗೆ ಹಿನ್ನಡೆಯಾದಾಗ ಶಿವದಾಸ್ ಘೋμï ಅವರು ಹೊಸ ಚಿಂತನೆಗಳನ್ನು ತುಂಬಿ ಮಾರ್ಕ್ಸ್ ವಾದ ವನ್ನು ಮತ್ತೆ ಬಲಿಷ್ಟಗೊಳಿಸಿದ್ದಾರೆ ಎಂದರು.

ಮುಖ್ಯ ಅತಿಥಿತಿಯಾಗಿ ಮಾತನಾಡಿದ ಎಸ್‍ಯುಸಿಐ ಪಕ್ಷದ ವಾಡಿ ನಗರ ಸಮಿತಿ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ, ಪ್ರಸಕ್ತ ಕೇಂದ್ರ ಬಿಜೆಪಿ ಸರ್ಕಾರ ಸೇರಿದಂತೆ ಜಗತ್ತಿನೆಲ್ಲೆಡೆ ಆಳುವ ಸರ್ಕಾರಗಳು ಇಂದು ಜನ ಹೋರಾಟಗಳಿಗೆ ಹೆದರಿದೆ. ಹಾಗಾಗಿ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರಗಳು ಫ್ಯಾಸಿವಾದಿ ಕ್ರಮವನ್ನು ಕೈಗೊಳ್ಳುತ್ತಿವೆ. ಆದಾಗ್ಯೂ ಇವರ ದುರಾಡಳಿತದ ವಿರುದ್ಧ ಜನತೆ ನಿರಂತರವಾಗಿ ಬೀದಿಗಿಳಿಯುತ್ತಿದ್ದಾರೆ. ಆದರೆ ಈ ಹೋರಾಟಗಳು ಸಂಘಟಿತವಾಗಿ ನಡೆಯುತ್ತಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಅಖಿಲ ಭಾರತ ಕಿಸಾನ್ ಕೇತ್ ಮಜ್ದೂರ್ ಸಂಘ (ಎಐಕೆಕೆಎಂಎಸ್)ದ ಚಿತ್ತಾಪುರ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ ಅಧ್ಯಕ್ಷತೆ ವಹಿಸಿದ್ದರು.

ರೈತ ಮುಖಂಡರಾದ ಮಲ್ಲಿಕಾರ್ಜುನ ಗಂದಿ, ಶರಣಪ್ಪ ಗಂಜಿ, ಸಾಬಣ್ಣ ಮುಷ್ಟಿಗೇರ, ರಮೇಶ ಪೂಜಾರಿ, ಜಯಶ್ರೀ ಕುಂಬಾರ, ಅನಿಲಗೌಡ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here