ಕಲಬುರಗಿ: ಸೋಮವಾರ ಲಿಟಲ್ ಲ್ಯಾಂಪ್ಸ್ ಪ್ಲೇ ಸ್ಕೂಲ್ ವತಿಯಿಂದ ಸಿಬ್ಬಂದಿ ವರ್ಗ ಮತ್ತು ಅತಿಥಿಗಳಿಂದ ಹಾಗೂ ಪುಟಾಣಿ ಮಕ್ಕಳೊಂದಿಗೆ ಗುರು “ವೇದವ್ಯಾಸರ “ ಜನ್ಮ ದಿನವನ್ನು ಗುರುಪೂರ್ಣಿಮಾ ದಿನ ಆಚರಿಸಲಾಯಿತು.
ಈ ವೇಳೆ ರಾಜೇಶ್ವರಿ.ಎನ್. ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಪೂಜೆಯನ್ನು ಮಾಡಿ, ಮಾತನಾಡುತ್ತಾ ಮೊದಲಿಗೆ ಎಲ್ಲರಿಗೂ ಗುರು ಪೂರ್ಣಿಮಾ ಹಾಗೂ ವೇದವ್ಯಾಸರ ಜನ್ಮದಿನದ ಹಾರ್ದಿಕ ಶುಭಾಶಯ ತಿಳಿಸುತ್ತಾ ಮಾತನಾಡಿದರು.
ಗುರುಪೂರ್ಣಿಮಾ ಭಾರತದ ಪ್ರಸಿದ್ಧ ಹಬ್ಬವಾಗಿದೆ ನಮ್ಮ ಜೀವನದಲ್ಲಿ ಗುರುವಿಗೆ ಬಹಳ ಮಹತ್ವವಿದೆ ಗುರುವಿಲ್ಲದ ಬದುಕಿಗೆ ಗೊತ್ತು ಗುರಿಯೇ ಇರಲ್ಲ ಮುಂದೆ ಗುರಿ ಹಿಂದೆ ಗುರು ಇರುವ ವ್ಯಕ್ತಿ ಮಹಾಸಾಧಕನಾಗುತ್ತಾನೆ, ಆ ಗುರುವಿಗೆ ಗೌರವ ಸಮರ್ಪಿಸುವ ದಿನವೇ ಗುರು ಪೂರ್ಣಿಮಾ, ಗುರುಪೂರ್ಣಿಮಾ ಎಂಬುದು ಗುರು ವೇದ ವ್ಯಾಸರನ್ನು ಸ್ಮರಿಸುವ ದಿನವಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ ಹಿಂದೂ ಧರ್ಮದ ಪ್ರಕಾರ ಗುರು ವೇದವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವೇದ ಎಂಬ ಹೆಸರಿನಲ್ಲಿ ಬೋಧಿಸಿದರು ಪ್ರತಿಯೊಬ್ಬರ ಬದುಕಿನಲ್ಲಿ ತಾಯಿಯೇ ಮೊದಲ ಗುರು ಎಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ ಜೀವನದಲ್ಲಿ ಸರಿಯಾದ ಮಾರ್ಗದರ್ಶನ ತೋರುವ ಪ್ರತಿಯೊಬ್ಬರು ಗುರುಗಳೇ ಇಂತಹ ಎಲ್ಲಾ ಗುರು ವೃಂದವನ್ನು ಸ್ಮರಿಸಲೇಬೇಕು ಎಂದು ಹೇಳಿದರು.