ಮಾಯೆ ಎನ್ನುವುದು ದೈವ ನಿರ್ಮಿತ: ಡಾ. ಚಿತ್ಕಳಾ ಮಠಪತಿ

0
130

ಕಲಬುರಗಿ: ಶರಣರ ಬಹುದೊಡ್ಡ ವಿಚಾರವೆಂದರೆ ಬದುಕನ್ನು ಒಪ್ಪಿಕೊಳ್ಳುವುದು, ಬದುಕನ್ನು ಪ್ರೀತಿಸುವುದು. ಅವರುತಮ್ಮ ಪಾಲಿಗೆ ಬಂದಂತಹ ಬದುಕಿನ ಸವಾಲುಗಳನ್ನು ಎದುರಿಸಿ, ನಿಭಾಯಿಸಿ ವಿಶ್ವಕ್ಕೆ ಮಾದರಿಯಾದರು. ಮಾಯೆ ಅದೆಷ್ಟು ನನ್ನ ಬೆನ್ನು ಹತ್ತಿದರೂ ನಾನು ಅಂಜುವುದಿಲ್ಲ” ಎಂದು ಅಕ್ಕ ಹೇಳುವುದು ಶರಣರು ಮಾಯೆಯನ್ನು ಸ್ವೀಕರಿಸಿದ ಪರಿಯನ್ನು ಸೂಚಿಸುತ್ತದೆ ಎಂದು ಕನ್ನಡ ಪ್ರಾಧ್ಯಾಪಕರಾದ ಡಾ. ಚಿತ್ಕಳಾ ಮಠಪತಿ ಹೇಳಿದರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ವಿಜಯಕುಮಾರ ಮಲ್ಲಿಕಾರ್ಜುನಪ್ಪ ನೂಲಾ ಸ್ಮರಣಾರ್ಥ ಅರಿವಿನ ಮನೆ 606 ನೆಯದತ್ತಿಕಾರ್ಯಕ್ರಮದಲ್ಲಿವಚನಗಳಲ್ಲಿ ಮಾಯೆಯ ಪರಿಕಲ್ಪನೆ’ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿ, ಮಾಯೆ ಎಂಬ ಪದ ನಮ್ಮಉತ್ತರ ಕರ್ನಾಟಕದಲ್ಲಿ ’ಮಾಯಾ’ ಎಂದು ಬಳಕೆಗೊಳ್ಳುತ್ತಾ ಪ್ರೀತಿ, ಮೋಹ, ಆಕರ್ಷಣೆ, ನಂಬಿಕೆ, ಪ್ರಜ್ಞೆ, ಇಂದ್ರಜಾಲವಿದ್ಯೆ ಮುಂತಾದ ಅರ್ಥಗಳಲ್ಲಿ ಸಾಂದರ್ಭಿಕವಾಗಿ ಬಳಕೆಯಾಗುತ್ತದೆ.ನಮ್ಮಜನಪದರು ಹಾಡುತ್ತಾ ’ಮಾಯೆದಂತಹ ಮಳೆಬಂತಣ್ಣ’ಎನ್ನುವಲ್ಲಿ ಆ ಪದಕ್ಕೆ ಮತ್ತೊಂದು ವಿಶೇಷಾರ್ಥ’ಅದ್ಭುತ’ಸೇರ್ಪಡೆಯಾಗುತ್ತದೆ.ಋಗ್ವೇದ ಉಪನಿಷತ್ತುಗಳಲ್ಲಿ ಈ ಪದ ಬಳೆಕೆಯಾದುದನ್ನು ನಾವು ಕಾಣಬಹುದುಒಟ್ಟಾರೆ ಮಾಯೆಯಆಡುಂಬೊಲವೇ ಈ ಸುತ್ತಲಿನ ಜಗತ್ತುಎಂದು ಪ್ರಾಜ್ಞರು ಅಭಿಪ್ರಾಯ ಪಡುತ್ತಾರೆ.

Contact Your\'s Advertisement; 9902492681

ಅಧ್ಯಕ್ಷತೆ ವಹಿಸಿ ಮಾತನಾಡಿದಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ ಅವರುನಮ್ಮ ನಡೆ-ನುಡಿ ಶುದ್ಧವಾಗಿದ್ದರೆ ನಮಗೆ ಮಾಯೆಯ ಭಯವಿಲ್ಲ. ಪರಿಶುದ್ಧ ವ್ಯಕ್ತಿತ್ವ ನಮ್ಮನ್ನುದೈವತ್ವದೆಡೆಕೊಂಡೊಯ್ಯುತ್ತದೆಎಂದರು.

ವೇದಿಕೆಯ ಮೇಲೆ ದತ್ತಿ ದಾಸೋಹಿಗಳಾದ ಶ್ರೀ ವಿಶ್ವನಾಥ ಖೂಬಾಉಪಸ್ಥಿತರಿದ್ದರು. ಪ್ರಧಾನಕಾರ್ಯದರ್ಶಿ ಎಚ್. ಕೆ.ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here