ಆಸಕ್ತಿದಾಯಕ ಕಲಿಕಾ ಪದ್ಧತಿಯಿಂದ ಯಶಸ್ಸು ಖಚಿತ: ಶೈಕ್ಷಣಿಕ ತಜ್ಞ ಭುಜಬಲಿ

0
54

ಕಲಬುರಗಿ: ವಿದ್ಯಾರ್ಥಿಗಳು ಕೇಳುವಿಕೆ, ನೋಡುವಿಕೆ ಮತ್ತು ಅನುಭವಕ್ಕೆ ತಂದುಕೊಳ್ಳುವ ಆಸಕ್ತಿದಾಯಕ ಹಾಗೂ ಪ್ರೇರಣಾತ್ಮಕ ಕಲಿಕಾ ಪದ್ದತಿಯಿಂದ ವಿವಿಧ ವಿಷಯಗಳನ್ನು ಸುಲಭವಾಗಿ ಅರಿತುಕೊಂಡು ಪರೀಕೆಯಲ್ಲಿ ಹೆಚ್ಚು ಅಂಕಗಳನ್ನು ಸಾಧಿಸಬಹುದೆಂದು ಬೆಂಗಳೂರಿನ ಮನೋತಜ್ಞ ಹಾಗೂ ಶಿಕ್ಷಣತಜ್ಞ  ಭುಜಬಲಿ ಬೋಗಾರ ಹೇಳಿದರು.

ನಗರದ ಎಸ್.ಬಿ.ಆರ್ ಶಾಲೆಯಲ್ಲಿ ಇಂದು ನಡೆದ ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್‌ಫಾರ್ಮೊ ಇನ್‌ಕಾರ್ಪ್ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಯಶಸ್ಸಿನ ಮೂಲ ಮಂತ್ರಗಳು ಎಂಬ ವಿಷಯದ ಮೇಲೆ ತರಬೇತಿ ಕಾರ್ಯಗಾರವನ್ನು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.  ಭುಜಬಲಿಯವರು ವಿದ್ಯಾರ್ಥಿಗಳನ್ನು ಉದ್ದೆಶಿಸಿ: ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸನ್ನುಗಳಿಸಲು ಏನು  ಮಾಡಬೇಕು. ಅದಕ್ಕಿರುವ ಮಾರ್ಗಗಳು ಯಾವುವು ಎಂಬ ಬಗ್ಗೆ ಅನೇಕ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಒಂದು ಮೈಂಡ್ ಮ್ಯಾಪಿಂಗ್ ಮಹತ್ವದ ವಿಧಾನವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಗಂಟೆಗಟ್ಟಲೆ ಮೊಬೈಲ್ ಬಳಸಿದ ನಂತರ ಓದುವ ಸಮಯ ಹಾಳುಮಾಡಿದೆ ಎಂದು ಪಶ್ಚಾತಾಪ -ತಪ್ಪಿನ ಅರಿವು ಉಂಟಾಗಿ ಮತ್ತೆ ಆ ಭಾವನೆಯಿಂದ ಹೊರಬರಲು ಮರಳಿ ಮೊಬೈಲ್-ಇಂಟರನೆಟ್ ಬಳಕೆಯ ವಿಷವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ. ಅದಕ್ಕಾಗಿ ದೈಹಿಕ ಚಟುವಟಿಕೆಗಳಾದ ವಾಕಿಂಗ್, ಪ್ರಾಣಾಯಾಮ, ಕೆಲಸದ ಬದಲಾವಾಣೆ, ಇನ್ನಿತರ ಹಲವು ತಂತ್ರಗಳನ್ನು ಅನುಸರಿಸಿದರೆ ಸಕಾರಾತ್ಮಕ ಮತ್ತು ಪರಿಣಾಮಕಾರಿ ಪರಿವರ್ತನೆ ಕಾಣಬಹುದು ಎಂದು ಮನೋತಜ್ಞ ಭುಜಬಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.

ಈ ತರಬೇತಿ ಕಾರ್ಯಗಾರವು ಪ್ರಾಂಶುಪಾಲರಾದ ಶ್ರೀ ಎನ್.ಎಸ್ ದೇವರಕಲ್ ಅವರ  ಮಾರ್ಗದರ್ಶನದಲ್ಲಿ ನಡೆಯಿತು. ಮೌನಯೋಗಿ ಫೌಂಡೇಶನ್‌ನ ಶ್ರಾವಣಯೋಗಿ ಹಿರೇಮಠ, ಎಸ್.ಬಿ.ಆರ್ ಶಾಲೆಯ ಶಿಕ್ಷಕ ವರ್ಗ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here