ಆಳಂದ: ಕೋರ್ಟನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಜನತಾ ಅದಾಲತ್ ನಲ್ಲಿ ದಂಪತಿ ಪಾಲ್ಗೊಂಡು ಹಿರಿಯ ನ್ಯಾಯಾಧೀಶರ ಸಮ್ಮುಖದಲ್ಲಿ ಮನಸ್ಸು ಬದಲಾಯಿಸಿ ಮತ್ತೆ ಒಂದಾಗುವ ತೀರ್ಮಾನಕ್ಕೆ ಜೋಡಿ ಬಂದು,ಹೊಸ ಜೀವನಕ್ಕೆ ಮತ್ತೆ ಕಾಲಿಟ್ಟರು.
ಪಟ್ಟಣದ ಜೇ.ಎಂ.ಎಫ್.ಸಿ.ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್.ಎಂ.ಅರುಟಗಿ ಅವರು ಬೇರಾಗಿದ್ದ ದಂಪತಿ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಅನೀಲ ಬೋಕತೆ ಹಾಗೂ ರೇಣುಕಾ ಗಣಪತಿ ಮೂಲಗೆ ಅವರನ್ನು ಕರೆಸಿ ನ್ಯಾಯಾಲಯ ಅವರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಿದರು.
ಡಿಓರ್ಸಗೆ ಅರ್ಜಿ ಹಾಕಿದ ಪ್ರಕರಣ ಸುಖಾಂತ್ಯ ಮಾಡಿ ಮತ್ತೆ ನ್ಯಾಯಾಲಯ ಒಂದು ಗೂಡಿಸಿದೆ.ಪರಸ್ಪರ ಹಾರ ಬದಲಾಯಿಸಿ ಒಂದಾಗಿ ಬಾಳುತ್ತೇವೆ ಎಂದು ನಗೆ ಬೀರಿದರು.ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರೇ ಜಗಳ ವಾದ ಮಾಡುವ ಗಂಡ ಹೆಂಡತಿ. ತಮ್ಮ ತಮ್ಮ ವೈಮನಸ್ಸುಗಳನ್ನ ನ್ಯಾಯಾಧೀಶರ ಎದುರು ದಂಪತಿಗಳ ವೈಮನಸ್ಸಿಗೆ ತಿಳಿ ಹೇಳುವ ಮೂಲಕ ಅವರನ್ನ ಒಂದು ಮಾಡುತ್ತಿರೋ ಈ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ. ಜನತಾ ಅದಾಲತ್ ನಲ್ಲಿ ಬಂದ ಜನರು ಅವರನ್ನು ಹರಿಸಿದರು.
ಹಿರಿಯ ವಕೀಲ ಬಿ.ನ್ ದೇಶಪಾಂಡೆ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.