ಭ್ರಷ್ಟಾಚಾರ ಆರೋಪ:ಕೃಷಿ ಜೆಡಿ ಅಮಾನತ್ತಿಗೆ ಒತ್ತಾಯ

0
51

ಸುರಪುರ: ಯಾದಗಿರಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ರೈತರ ಬಗ್ಗೆ ಮಲತಾಯಿ ಧೋರಣೆ ತೋರಿಸಿದ್ದರಿಂದ ಇಂದು ರೈತರು ಯೂರಿಯಾ ಇಲ್ಲದೆ ಸಂಕಷ್ಟ ಪಡುವಂತಾಗಿದೆ.ಆದ್ದರಿಂದ ಜೆಡಿಯವರನ್ನು ಕೂಡಲೆ ಅಮಾನತ್ತು ಮಾಡುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.

ಒಕ್ಕೂಟದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿಯವರು ಸುರಪುರ,ಹುಣಸಗಿ ತಾಲ್ಲೂಕಿನ ಕೆಲ ಹೋಬಳಿಗಳ ಹೊರತುಪಡಿಸಿ ಇನ್ನುಳಿದ ಎಲ್ಲಾ ಹೋಬಳಿ ಮತ್ತು ನಗರ ಪ್ರದೇಶಕ್ಕು ಯೂರಿಯಾ ರಸಗೊಬ್ಬರ ಪೂರೈಕೆ ಮಾಡದಂತೆ ಆದೇಶಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ.ಈಗಾಗಲೆ ರೈತರು ಭತ್ತ,ಹತ್ತಿ,ಶೆಂಗಾ ಮತ್ತಿತರೆ ಬೆಳೆಗಳನ್ನು ಹಾಕಿ ರಸಗೊಬ್ಬರಕ್ಕಾಗಿ ಎದರು ನೋಡುತ್ತಿದ್ದಾರೆ.ಆದರೆ ಜೆಡಿಯವರು ಯೂರಿಯಾ ರಸಗೊಬ್ಬರ ಸರಬರಾಜು ಮಾಡದಂತೆ ತಡೆದು ರೈತರಿಗೆ ಸಂಕಷ್ಟಕ್ಕೆ ದೂಡಿದ್ದಾರೆ.ಆದ್ದರಿಂದ ಜೆಡಿಯವರನ್ನು ಕೂಡಲೆ ಅಮಾನತ್ತು ಮಾಡಬೇಕು ಮತ್ತು ಜಿಲ್ಲಾಯಲ್ಲಿ ನಡೆದ ಕೃಷಿ ಹೊಂಡ ನಿರ್ಮಾಣ,ಕೃಷಿ ಯಂತ್ರೋಪಕರಣಗಳ ಸರಬರಾಜಿನಲ್ಲಿ ನಡೆದ ಭ್ರಷ್ಟಾಚಾರ,ವಾಟರ ಸೆಡ್ ಯೋಜನೆಯು ಬೋಗಸಾಗಿವೆ.ಇವುಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಮೂಲಕ ಸಲ್ಲಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಅನೇಕರಿದ್ದಸಸರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here