ಕಲಬುರಗಿ; ನಗರದ ವಾರ್ಡ ನಂ. 54ರ ತಾರಫೈಲ್ ಏರಿಯಾದ ಜಮಶೆಟ್ಟಿ ನಗರದಲ್ಲಿ ಸರಕಾರಿ ಪ್ರೌಢಶಾಲೆಯಿದ್ದು, ಕಂಪೌಂಡ ಗೋಡೆ ನಿರ್ಮಿಸಲು ಹಾಗೂ ತಾರಫೈಲ್ ಏರಿಯಾದಲ್ಲಿ ಬರುವ ಪುರಾತನ ಪ್ರಸಿದ್ಧಿ ಹುಲಿಗಮ್ಮ ದೇವಿ ದೇವಸ್ಥಾನದ ಜಿರ್ಣೋದ್ಧಾರಕ್ಕಾಗಿ ಅನುದಾನ ಮಂಜೂರು ಮಾಡಬೇಕೆಂದು ಕರುನಾಡ ವಿಜಯಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ ಎಸ್. ರಾಂಪೂರ ಅವರು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ನಗರದ ವಾರ್ಡ ನಂ. 54ರ ತಾರಫೈಲ್ ಏರಿಯಾದ ಜಮಶೆಟ್ಟಿ ನಗರದಲ್ಲಿ ಸರಕಾರಿ ಪ್ರೌಢಶಾಲೆಯಿದ್ದು, ಸದರಿ ಶಾಲೆಗೆ ಕಂಪೌಂಡ ಗೋಡೆ ಇಲ್ಲದೇ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತುಂಬಾ ತೊಂದರೆಯಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆದಿರುವ ವರದಿಯಾಗಿರುತ್ತದೆ. ಇದರಿಂದಾಗಿ ಸದರಿ ಶಾಲೆಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು, ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡಲಾಗಿದೆ.
ಹಾಗೇಯೇ ತಾರಫೈಲ್ ಬಡಾವಣೆಯಲ್ಲಿ ಪುರಾತನ ಪ್ರಸಿದ್ಧಿ ಹುಲಿಗಮ್ಮ ದೇವಸ್ಥಾನವಿದ್ದು, ಪೂರ್ತಿಯಾಗಿ ಕಟ್ಟಡ ಬಿದ್ದು ಹೊಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಧಾರ್ಮಿಕ ಕಾರ್ಯಕ್ರಮ ಹಾಗೂ ಸಮಾರಂಭಗಳನ್ನು ನಡೆಸಿಕೊಂಡು ಹೋಗಲು ತುಂಬಾ ತೊಂದರೆಯಾಗಿದೆ.
ಆದ್ದರಿಂದ ದಯಾಳುಗಳಾದ ತಾವುಗಳು ನಮ್ಮ ಮನವಿಯನ್ನು ಮಾನವೀಯತೆಯಿಂದ ಪುರಸ್ಕರಿಸಿ, ಕಲಬುರಗಿ ನಗರದ ವಾರ್ಡ ನಂ. 54ರ ತಾರಫೈಲ್ ಏರಿಯಾದ ಜಮಶೆಟ್ಟಿ ನಗರದಲ್ಲಿ ಸರಕಾರಿ ಪ್ರೌಢಶಾಲೆಗೆ ಕಂಪೌಂಡ (ಸುತ್ತುಗೋಡೆ) ಹಾಗೂ ಬಡಾವಣೆಯ ಪುರಾತನ ಪ್ರಸಿದ್ಧಿ ಹುಲಿಗಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಅಗತ್ಯ ಅನುದಾನ ಮಂಜೂರು ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮುಖಂಡರಾದ ರಾಜು, ಶೇಕರ ಭಂಡಾರಿ, ನಾಗರಾಜ ಎಸ್, ಬಾಬುರಾವ್ ಸೇರಿದಂತೆ ಬಡಾವಣೆಯ ಅನೇಕ ನಾಗರಿಕರು ಸೇನೆಯ ಕಾಯ್ಕರ್ತರು ಇದ್ದರು.