ಪ್ರವಾಹ ಸಂತ್ರಸ್ತರಿಗೆ ಬಟ್ಟೆ ರವಾನಿಸಿದ ಬಸವ ಬಳಗ

0
133

ವಾಡಿ: ಕೃಷ್ಣಾ ಪ್ರವಾಹದಿಂದ ಜವಾವೃತಕ್ಕೆ ತುತ್ತಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳ ಪ್ರವಾಹ ಸಂಸ್ತ್ರಸ್ತರಿಗಾಗಿ ವಾಡಿ ಪಟ್ಟಣದ ಶ್ರೀ ಬಸವ ಗ್ರೂಪ್‌ನ ಯುವಕರು, ಬಟ್ಟೆ ಮತ್ತು ಹೊದಿಕೆಗಳನ್ನು ರವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಕ್ಕಿ ಬಂದ ಕೃಷ್ಣಾ ನದಿಯ ರುದ್ರಾವತಾರಕ್ಕೆ ಸಿಕ್ಕು ವಸತಿ ಹೀನವಾದ ಸಾವಿರಾರು ಕುಟುಂಬಗಳು ಸರಕಾರ ತೆರೆದ ಗಂಜಿ ಕೇಂದ್ರಗಳಲ್ಲಿ ದಿನಗಳೆಯುತ್ತಿದ್ದಾರೆ. ಮನೆಯೊಳಗಿನ ದವಸದಾನ್ಯಗಳೆಲ್ಲ ನೀರುಪಾಲಾಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ನೀರು ಬಂದು ಊರು ಮುಳುಗಿಸಿ ಬದುಕು ಕಸಿದುಕೊಂಡಿದ್ದು, ವಿವಿಧ ಅಗತ್ಯತೆಗಳಿಂದ ಜನರು ವಂಚಿತರಾಗಿದ್ದಾರೆ ಎಂಬ ಮಾಹಿತಿ ಪಡೆದುಕೊಂಡ ಸ್ಥಳೀಯ ಶ್ರೀಬಸವ ಗ್ರೂಪಿನ ಸದಸ್ಯರು, ಪ್ರವಾಹ ಸಂತ್ರಸ್ತರಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಣೆಗೆ ಮುಂದಾಗುವ ಮೂಲಕ ಅನೇಕ ವಸ್ತುಗಳನ್ನು ಮತ್ತು ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಾರೆ.

Contact Your\'s Advertisement; 9902492681

ಪ್ರವಾಹ ಪೀಡಿತರಿಗಾಗಿ ಮಿಡಿದ ಸ್ಥಳಿಯರು ಸಾವಿರಾರು ಜನರಿಗಾಗುವಷ್ಟು ಹಾಸಿಗೆ, ಹೊದಿಕೆ, ಮಕ್ಕಳಿಗಾಗಿ ಬಟ್ಟೆ, ರೊಟ್ಟಿ, ಗೋದಿ ಹಿಟ್ಟು, ಬಿಸ್ಕತ್, ಸಾಬೂನು, ಉಪ್ಪು, ಸ್ಯಾನಿಟರಿ ಪ್ಯಾಕ್‌ಗಳು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ದಾನವಾಗಿ ನೀಡಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಅನೇಕ ಜನರು ಮುಂದೆ ಬಂದಿರುವುದು ಸಂತಸ ತಂದಿದೆ. ಸಂಗ್ರಹಿಸಲಾದ ಎಲ್ಲಾ ವಸ್ತು-ಸಾಮಾಗ್ರಿ ಪದಾರ್ಥಗಳನ್ನು ವಾಹನದಲ್ಲಿ ಸಾಗಿಸುವ ಮೂಲಕ ನೇರವಾಗಿ ಪ್ರವಾಹ ಸಂತ್ರಸ್ತರಿಗೆ ತಲುಪಿಸಲು ತೆರಳುತ್ತಿದ್ದೇವೆ ಎಂದು ಶ್ರೀಬಸವ ಗ್ರೂಪ್ ಅಧ್ಯಕ್ಷ ಸತೀಶ ಸಾವಳಗಿ, ಅಂಬೇಡ್ಕರ್ ಯೂತ್ ಕ್ಲಬ್ ಅಧ್ಯಕ್ಷ ಸಂದೀಪ ಕಟ್ಟಿ ತಿಳಿಸಿದರು.

ದಿ ಕೇರ್ ಗ್ರೂಪ್‌ನ ಸಾಯಿನಾಥ ತೋಳೆ, ಡಿ.ವಿ.ಎನ್.ಹರೀಶ, ಗೌರವ ಖಂಡೇಲವಾಲಾ, ಜೈಗಂಗಾ ಡ್ರೆಸ್ಸೆಸ್‌ನ ನಾಗೇಂದ್ರ ಬೊಮ್ಮನಳ್ಳಿ, ಬಸವ ಬಳಗದ ಸಂಜಯ ರಾಠೋಡ, ಸಿದ್ದು ಕಲಶೆಟ್ಟಿ, ಬನಶಂಕರ ಮುಸ್ಟೂರ, ಸಂತೋಷ ಕಲಶೆಟ್ಟಿ, ಬಸವರಾಜ ಕಲಶೆಟ್ಟಿ, ಗುರು ನಾಗೂರ, ಜಗನ್ನಾಥ ಬಣಮಗಿ, ಮಹೇಶ ಬಡಿಗೇರ, ವಿಶ್ವನಾಥ ಮರತೂರ, ರುದ್ರು ದೇಸಾಯಿ, ಉಮೇಶ ಅವರಾದ, ವೀರೇಶ ದೇವಾಪುರ ಹಾಗೂ ಮತ್ತಿತರ ಯುವಕರು ಸಾಮಾಗ್ರಿಗಳನ್ನು ವಾಹನದಲ್ಲಿ ಹೊತ್ತು ಕೃಷ್ಣಾ ಪ್ರವಾಹ ಪೀಡಿತ ಯಾದಗಿರಿ ಜಿಲ್ಲೆಯ ಗ್ರಾಮಗಳತ್ತ ಪ್ರಯಾಣಿಸಿದರು. ಸಿದ್ದಯ್ಯಶಾಸ್ತ್ರೀ ನಂದೂರಮಠ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here