ಕಲಬುರಗಿ: ಕಲಬುರಗಿ ಎಸ್ಪಿ ಯಡಾ ಮಾರ್ಟಿನ್ ವರ್ಗಾವಣೆಯಾಗಿದ್ದು, ಕಲಬುರಗಿಗೆ ನೂತನ ಎಸ್ಪಿಯಾಗಿ 2011ನೇ ಬ್ಯಾಚ್ ಐಪಿಎಸ್ ಪಾಟೀಲ ವಿನಾಯಕ ವಸಂತರಾವ ನಿಯುಕ್ತರಾಗಿದ್ದಾರೆ.
ನೂತನ ಎಸ್ಪಿ ಐಪಿಎಸ್ ಪಾಟೀಲ ವಿನಾಯಕ ವಸಂತರಾವ ಅವರು ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದರು.
ಎಂ.ಪಿ. ಚುನಾವಣೆಗೂ ಮುನ್ನ ಇಲ್ಲಿಗೆ ಎಸ್ಪಿಯಾಗಿ ಆಗಮಿಸಿದ್ದ ಯಾಡ ಮಾರ್ಟಿನ್ ಅವರು, ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸದಿದ್ದರೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡಿಕೊಂಡು ಬಂದಿದ್ದರು.
ನೂತನ ಎಸ್ಪಿ ಕೂಡ ಇದೇ ಮಾದರಿಯಲ್ಲಿ ಕಾರ್ಯನಿರ್ವಹಿಸಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವಂತಾಗಲಿ ಎಂಬುದು ಇ-ಮಿಡಿಯಾ ಲೈನ್ ಆಶಯವಾಗಿದೆ.