ದ್ವಿಚಕ್ರವಾಹನಗಳ ಕಳ್ಳತನ: ಅಂತರ್ರಾಜ್ಯ ಕಳ್ಳನ ಸೆರೆ

0
140

ಕಲಬುರಗಿ: ದ್ವಿಚಕ್ರವಾಹನಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೇಡಂ ಠಾಣೆಯ ಪೋಲಿಸರು ಅಂತರ್ರಾಜ್ಯ ಕಳ್ಳನಿಗೆ ಬಂಧಿಸಿದ್ದಾರೆ. ಬಂದಿತನಿಗೆ ತಾಂಡೂರ್ ಗುಮಾಸ್ತ್ ನಗರ ಮೂಲದ ಹಾಲಿ ವಸ್ತಿ ಕಾಳಗಿ ಪಟ್ಟಣದ ವಡ್ಡರಗಲ್ಲಿಯ ನಿವಾಸಿ ಸಾಹೇಬ್ ಪಟೇಲ್ ತಂದೆ ಮಹಿಬೂಬ್‌ಸಾಬ್ ಬಾರಾಮನಿ (೪೦) ಎಂದು ಗುರುತಿಸಲಾಗಿದೆ.

ಬಂಧಿತನಿಂದ ಸೇಡಂ ಪಟ್ಟಣ ಹಾಗೂ ನೆರೆಯ ತೆಲಂಗಾಣ್ ರಾಜ್ಯದ ತಾಂಡೂರು, ಬಸಿರಾಬಾದ್ ಹಾಗೂ ಇತರೆಡೆಗಳಲ್ಲಿ ಕಳ್ಳತನ ಮಾಡಿದ್ದ ಸುಮಾರು ೫.೫೦ ಲಕ್ಷ ರೂ.ಗಳ ಮೌಲ್ಯದ ೧೧ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಚರ ಸೇಡಂ ಪಟ್ಟಣದ ಮಲ್ಲು ಅಲಿಯಾಸ್ ಮಲ್ಲಿಕಾರ್ಜುನ್ ತಂದೆ ಶರಣಪ್ಪ ಟೆಂಗಳಿ ಪರಾರಿಯಾಗಿದ್ದು, ಆತನ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದೆ.
ಸೇಡಂ ತಾಲ್ಲೂಕಿನ ಯಡಗಾ ಗ್ರಾಮದ ನಾಗಪ್ಪ ತಂದೆ ಚಂದ್ರಪ್ಪ ದೇವನೂರ್ ಅವರು ಸೇಡಂ ತಾಲ್ಲೂಕು ಆಸ್ಪತ್ರೆಯಲ್ಲಿನ ಆವರಣದಲ್ಲಿ ಎರಡು ದ್ವಿಚಕ್ರವಾಹನಗಳು ಕಳ್ಳತನವಾದ ಕುರಿತು ಸೇಡಂ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

Contact Your\'s Advertisement; 9902492681

ಸೇಡಂ ಪೋಲಿಸ್ ಠಾಣೆಯ ಸಿಪಿಐ ಹಾಗೂ ಪಿಐ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪೃತ್ವಿರಾಜ್, ಶಿವಕುಮಾರ್, ಮನೋಹರ್, ತೋಟಯ್ಯಸ್ವಾಮಿ, ಶ್ರೀನಿವಾಸ್ ರೆಡ್ಡಿ, ಅಲ್ಲಾಭಕ್ಷ , ಆಸೀಫ್, ವಿಠಲರೆಡ್ಡಿ, ರಾಜಕುಮಾರ್ ಹಾಗೂ ಸುನೀಲಕುಮಾರ್ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here