ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಅಧಿಕ ಮಾಸ ಪ್ರಯುಕ್ತ ಒಂದು ತಿಂಗಳ ಕಾಲ ಪ್ರತಿದಿನವೂ ಅರ್ಚಕರಾದ ಗುಂಡಾಚಾರ್ಯ ನರಿಬೊಳ ಅವರ ನೇತೃತ್ವದಲ್ಲಿ ಪವಮಾನ ಹೋಮ ನಡೆಯುತ್ತಿದೆ.
ಬೆಳಿಗ್ಗೆ ವಿಶೇಷ ಪೂಜೆ, ಹೋಮ ಸಂಜೆ ಮಹಿಳೆಯರಿಂದ ಭಜನೆ ನಂತರ ಪಂಡಿತರಿಂದ ಪ್ರವಚನ ನಡೆಯುತ್ತಿದೆ. ಗುಂಡಾಚಾರ್ಯರು ಮಾತನಾಡುತ್ತ ಅಧಿಕ ಮಾಸ ಮೂರು ವರ್ಷಕ್ಕೊಮ್ಮೆ ಬರುತ್ತದೆ ಅಧಿಕ ಮಾಸವನ್ನು ಪುರುಷೋತ್ತಮ ಮಾಸ ಎಂದು ಕರೆಯುತ್ತಾರೆ.
ಈ ಮಾಸದಲ್ಲಿ ಮಾಡುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ಕೆ ಅಧಿಕ ಪುಣ್ಯವಿದೆ. ದೀಪಧಾನ ಅಪೂಪ ಧಾನ, ಅನ್ನಧಾನಕ್ಕೆ ಬಹಳ ಪುಣ್ಯವಿದೆ. ಹಾಗೂ ಈ ಮಾಸದಲ್ಲಿ ಹೋಮ ಹವನ ಭಜನೆಗಳನ್ನು ಹೆಚ್ಚಿನ ಸಂಖ್ಯಯಲ್ಲಿ ಮಾಡಿ ಅಧಿಕ ಪುಣ್ಯ ಸಂಪಾದನೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಡಿ ವಿ ಕುಲಕರ್ಣಿ, ಬಾದರಾಯರಾಚಾರ್ಯ, ವೆಂಕಟೇಶ ಮಾಲಗತ್ತಿ, ವೈಭವ, ಗುರುರಾಜ ಸೇರಿದಂತೆ ಅನೇಕರು ಭಾಗವಹಿಸಿದ್ದರು.