ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖ

0
46

ಕಲಬುರಗಿ: ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡಿಕೊಳ್ಳದ ತಂದೆ ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುವ ಮುಗ್ದ ಜೀವಿಗಳು. ಮಗುವಿಗೆ ಶಿಕ್ಷಣ, ಸಂಸ್ಕಾರ, ಬುದ್ಧಿಯನ್ನು ನೀಡಿ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.

ನಗರದ ಸೈಯದ್ ಚಿಂಚೋಳಿ ರಸ್ತೆಯಲ್ಲಿರುವ ‘ಮಹಾದೇವಿ ತಾಯಿ ವೃದ್ಧಾಶ್ರಮ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಪಾಲಕರÀ ದಿನಾಚರಣೆ’ಯ ಪ್ರಯುಕ್ತ ವೃದ್ಧಾಶ್ರಮದ ಹಿರಿಯ ಜೀವಿಗಳಿಗೆ ಗೌರವ ಸತ್ಕರಿಸಿ ನಂತರ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ ಮಾತನಾಡಿ, ಮಕ್ಕಳು ತಮ್ಮ ಪಾಲಕರನ್ನು ಎಂದಿಗೂ ಕೂಡಾ ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ದಿ ಮಾಡಬಾರದು. ದೊಡ್ಡವರಾದ ಮಕ್ಕಳನ್ನು ಪಾಲಕರು ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಎಂಬ ಭಾವನೆಗಿಂದ ಗೆಳೆಯನ ರೀತಿಯಲ್ಲಿ ಕಾಣುವುದು ಉತ್ತಮ. ಮಕ್ಕಳು ತಮ್ಮ ಪಾಲಕರ ಮಾತುಗಳನ್ನು ಆಲಿಸಿ, ಮುನ್ನೆಡೆಯಬೇಕು. ತಮ್ಮ ಬೆಳವಣಿಗೆಯಲ್ಲಿ ಪಾಲಕರ ಶ್ರಮ ಮರೆಯಬಾರದು. ತಮ್ಮ ಜೊತೆ ನಮ್ಮ ಬಳಗ ಇರುತ್ತದೆ ಎಂದು ವಯೋವೃದ್ಧರಿಗೆ ಧೈರ್ಯ ತುಂಬಿದರು.

ಕಾರ್ಯಕ್ರಮದಲ್ಲಿ ಬಸಮ್ಮ ಕೆ.ಸ್ಥಾವರಮಠ, ಪ್ರೇಮಾ ಫರತಾಬಾದ, ಶಿವಲಿಂಗಪ್ಪ ಸಾವಳಗಿ, ಸಿದ್ರಾಮಪ್ಪ ಯಳಸಂಗಿ, ಮಲ್ಲಿಕಾರ್ಜುನ ಹೊಸಪೇಟ್, ನಾಗಣ್ಣ ಅಗ್ರೆ, ರಜೇಂದ್ರ ಇಂಜಾಳೆ, ಸೂರ್ಯಕಾಂತ ದೇಶಪಾಂಡೆ, ವೀರಭದ್ರಪ್ಪ ಬೆನಕನಳ್ಳಿ, ಭೀಮಾಶಂಕರ ಸಾಗನೂರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here