ಶಹಾಬಾದ: ತಾಲೂಕಿನ ರಾವೂರ ಗ್ರಾಮದ ಮೋರಾಜಿ ದೇಸಾಯಿ ವಸತಿ ನಿಲಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಎಂ ಖರ್ಗೆಜಿಯವರ 46ನೇ ಹುಟ್ಟು ಹಬ್ಬ ಪ್ರಯುಕ್ತ ಪಿಯುಸಿ ವಿಜ್ಞಾನ ವಿಭಾಗ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೆಪಿಸಿಸಿ ಸದಸ್ಯರಾದ ಶ್ರೀನಿವಾಸ್ ಸಗರ್ ಪುಸ್ತಕ ವಿತರಣೆ ಮಾಡಿ ಮಾತನಾಡಿ, ಈ ಮುರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಾಲೂಕ ಮಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಾಗಬೆಕು ಹಾಗೂ ವಸತಿ ನಿಲಯದ ಹೆಸರು ತರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಿಯಾಂಕ ಖರ್ಗೆಜಿಯವರು ಶಿಕ್ಷಣ ಪ್ರೇಮಿಗಳು ,ಪ್ರಬುದ್ಧ ರಾಜಕಾರಣಿಗಳು, ಸಾಮಾಜಿಕ ಕಾಳಜಿ ಇರುವ ವ್ಯಕ್ತಿಗಳು, ಕ್ರಿಯಾಶೀಲರು ಹಾಗೂ ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿಗೆ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಮುಖಂಡರಾದ ಅಬ್ದುಲ್ ಅಜೀಜ ಸೇಠ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಗುರಿ ಇಟ್ಟುಕೊಂಡು ಆಸಕ್ತಿಯಿಂದ ಓದಬೇಕು ಹಾಗೂ ಬಿಡುವಿನ ಅವಧಿಯಲ್ಲಿ ಶಾಲಾ ಗ್ರಂಥಾಲಯ ದಲ್ಲಿ ಇರುವ ಸ್ಪರ್ಧಾತ್ಮಕ ಪುಸ್ತಕಗಳು ಓದಿಕೊಂಡು ನಿಮ್ಮ ಗುರಿ ತಲುಪುವಂತೆ ಶ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹೇಬಗೌಡ ತುಮಕೂರು, ಯುನಿಸ್ ಪ್ಯಾರೆ ,ಚಂದ್ರಶೇಖರ್ ಅಂಗಡಿ, ಶಿವಯೋಗಿ ಸೂಲಹಳ್ಳಿ, ಮಹಿಬೂಬ್ ಖಾನ್, ಹಾಗೂ ಪ್ರಾಂಶುಪಾಲರಾದ ಶಶಿಧರ್ ವಿ ಸೋನಾರ್, ನಿಲಯ ಪಾಲಕರಾದ ಬಸಪ್ಪ ತಳವಾರ್ ಉಪಸ್ಥಿತರಿದ್ದರು.
ಶಿಕ್ಷಕ ವೃಂದದವರಾದ ಭೀಮಶಂಕರ ಇಂಗಳೆ, ಪ್ರದೀಪ್ ಕವಡೆ ,ಮಹಾಲಿಂಗ ನಾಯಕ್, ಸುರೇಶ್ ಏರಿ ಉಪಸ್ಥಿತರಿದ್ದರು. ಶಿಕ್ಷಕರಾದ ಪಿ.ಎಸ್. ಮೇತ್ರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.