ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

0
21

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ ಇಂದಿಗೂ ಕೂಡಾ ಹಿಂದೂ-ಮುಸ್ಲಿಂ ಧರ್ಮಿಯರು ಜೊತೆಗೂಡಿ ಆಚರಿಸುವ ಪ್ರಮುಖ ಹಬ್ಬ ಮೋಹರಂವಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಲಂಗ್ ಹೋಟೆಲ್ ಸಮೀಪದ ಚೌದರಿ ಖಾಸಿಂಸಾಬ್ ಕಟ್ಟಾ ಮಸೀದಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಮೋಹರಂ ಭಾವೈಕ್ಯತೆ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು. ಮೋಹರಂ ಹಬ್ಬವು ಇಂದಿಗೂ ಕೂಡಾ ಎಲ್ಲರೂ ಒಂದೇ ಎಂಬ ಭಾವನೆಯಿಂದ ಭಾಗವಹಿಸಲಾಗುತ್ತಿದೆ. ಇದು ಸೌಹಾರ್ಧತೆಗೆ ಪೂರಕವಾಗಿದೆ. ಇಂತಹ ಹಬ್ಬ, ಆಚರಣೆಗಳು ಪ್ರಸ್ತುತ ಸಂದರ್ಭದಲ್ಲಿ ತುಂಬಾ ಅವಶ್ಯಕತೆಯಿವೆ. ಧರ್ಮ, ಜಾತಿಗಳ ಆಧಾರದ ಮೇಲೆ ಸಂಘರ್ಷ ಸಲ್ಲದು ಎಂದರು.

Contact Your\'s Advertisement; 9902492681

ಮಸೀದಿಯ ಮುಖ್ಯಸ್ಥ ನೂರ್‍ಅಲಿ ಚೌದರಿ ಮಾತನಾಡುತ್ತಾ, ಇಸ್ಲಾಂ ಧರ್ಮವು ಸಹೋದರತ್ವ ಭಾವ ಸಾರುತ್ತದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಅನ್ಯಾಯ, ಅಧರ್ಮ, ಶೋಷಣೆಯ ನಿರ್ಮೂಲನೆ ಶ್ರಮಿಸಿ, ಕೋಮು ಸೌಹಾರ್ಧತೆ ಸಾರಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಸಂದೇಶ, ತತ್ವದ ಅನುಸರಣೆಯಿಂದ ಮನುಕುಲದ ಒಳಿತಾಗಲು ಸಾಧ್ಯವಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಸಂಗಮೇಶ ಬಳಗಾನೂರ, ಚಂದ್ರಕಾಂತ ಕಲಶೆಟ್ಟಿ, ಕಾಶಿಮ್ ಚೌದರಿ, ಶೇಖ್ ಮಸ್ತಾನ್ ಖಾದ್ರಿ, ಅಯುಬ್‍ಸಾಬ್ ಶೇಖ್, ಅಹಮ್ಮದ್ ಅಲಿ ಪುಟಾಣೆಘರ್, ಸಮೀರ ಜಮ್ಮು, ಸಲೀಮ್ ಪಠಾಣ, ಶಾಯಿದ್ ಸೈಯದ್, ಮಸ್ತಾನ್ ಗುಲ್ಫರೋಶ್, ಅಶ್ಫಕ್ ಅಹಮ್ಮದ್, ಮಬೀನ್ ಪರ್ವೇಶ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here