ಕಲಬುರಗಿ: ಫೇಕ್ ಲೆಟರ್ ಹೆಡ್ ಮುದ್ರಿಸಿ ನನ್ನ ವೈಯಕ್ತಿಕ ತೇಜೋವದೆ ಹಾಗೂ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಮಧ್ಯೆ ಭಿನ್ನಮತ ಸೃಷ್ಟಿಸಲಾಗಿದೆ ಎಂದು ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ದೂರು ನೀಡಿದ್ದಾರೆ.
ಮಂಗಳವಾರ ಬಿ.ಆರ್ ಪಾಟೀಲ್ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೇಟರ್ ಒಂದು ಕರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ವರಿಷ್ಠಾಧಿಕಾರಿ ಈಶಾ ಪಂತ್ ಅವರಿಗೆ ಭೇಟಿ ನೀಡಿದ ಅವರು ನನ್ನ ಹೆಸರಲ್ಲಿ ಫೇಕ್ ಲೆಟರ್ ಹೆಡ್ ಮುದ್ರಿಸಿ ನನ್ನ ವೈಯಕ್ತಿಕ ತೇಜೋವದೆ ಮಾಡಲು ಪ್ರಯತ್ನಿಸುತ್ತಿರುವ ಮತ್ತು ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಮಧ್ಯೆ ಭಿನ್ನಮತ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ಆರೋಪಿಗಳು ಯಾರೇ ಆಗಿರಲಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಸತ್ಯಾಂಶವನ್ನು ಬಯಲು ಮಾಡಬೇಕೆಂದು ಒತ್ತಾಯಿಸಿದರು.