1 ರಿಂದ ಹಳಕರ್ಟಿ ದರ್ಗಾ ಶರೀಫ್ ಉರೂಸ್; ಸರ್ವಧರ್ಮ ಸಮ್ಮೇಳನ-ಖವ್ವಾಲಿ ಗಾಯನ-ಕವಿ ಸಮ್ಮೇಳನ

0
20

ವಾಡಿ: ಕಲ್ಯಾಣ ಕರ್ನಾಟಕ ಭಾಗದ ಪ್ರಖ್ಯಾತ ಮುಸ್ಲಿಂ ಧಾರ್ಮಿಕ ಸ್ಥಳವಾದ ಹಳಕರ್ಟಿ ದರ್ಗಾದ ಹಜರತ್ ಖ್ವಾಜಾ ಸೈಯದ್ ಮೊಹಮ್ಮದ್ ಬಾದಶಹಾ ಖ್ವಾದ್ರಿ ಚಿಸ್ತಿ ಯಮನಿ ಸಾಹೇಬ್ ಅವರ 46ನೇ ಉರೂಸ್ ಉತ್ಸವ ಅ.1 ರಿಂದ ಶುರುವಾಗಲಿದ್ದು, ಲಕ್ಷಾಂತರ ಭಕ್ತರ ಆಗಮನಕ್ಕಾಗಿ ಉರೂಸ್ ಸಮಿತಿ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಹಳಕರ್ಟಿ ದರ್ಗಾ ಶರೀಫ್ ಖ್ವಾಜಾ ಸೈಯದ್ ಅಬು ತುರಾಬ ಶಹಾ ಖ್ವಾದ್ರಿ, ಪ್ರತಿವರ್ಷ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೈದರಾಬಾದ, ಮುಂಬೈ, ಉತ್ತರ ಪ್ರದೇಶಗಳಿಂದ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಎಲ್ಲಾ ಭಕ್ತರಿಗೂ ಅನ್ನದಾನ ವ್ಯವಸ್ಥೆ ಮಾಡಲಾಗುತ್ತಿದೆ. ದರ್ಗಾದಲ್ಲಿ 10 ರಿಂದ 15 ಸಾವಿರ ಭಕ್ತರಿಗೆ ವಸತಿ ವ್ಯವಸ್ಥೆಯಿದೆ ಎಂದರು.

Contact Your\'s Advertisement; 9902492681

ಅ.31 ರಂದು ಸಂಜೆ 5:30ಕ್ಕೆ ದರ್ಗಾದಲ್ಲಿ ಸಾಮೂಹಿಕ ಖುರಾನ್ ಪಠಣ ಹಾಗೂ 7:15ಕ್ಕೆ ಸರ್ವಧರ್ಮ ಸಮ್ಮೇಳನ ಏರ್ಪಡಿಸಲಾಗಿದ್ದು, ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ ಶ್ರೀಶರಣಬಸವಪ್ಪ ಅಪ್ಪಾ, ಹಳಕರ್ಟಿಯ ಶ್ರೀಮುನೀಂದ್ರ ಸ್ವಾಮೀಜಿ, ನಾಲವಾರ ಮಠದ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ, ಅಬ್ಬೆತುಮಕೂರಿನ ಶ್ರೀಗಂಗಾಧರ ಸ್ವಾಮೀಜಿ, ರಾವೂರ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ನಿರುಗುಡಿಯ ಶ್ರೀ ಹವಾ ಮಲ್ಲಿನಾಥ ಸ್ವಾಮೀಜಿ, ಶ್ರೀ ಹಂಪಯ್ಯ ಸ್ವಾಮಿ ಅಳ್ಳೊಳ್ಳಿ, ಚಿತ್ತಾಪುರದ ಶ್ರೀಸೋಮಶೇಖರ ಸ್ವಾಮೀಜಿ, ಹಳಕರ್ಟಿ ಸಿದ್ಧೇಶ್ವರ ಧ್ಯಾನಧಾಮದ ಶ್ರೀರಾಜಶೇಖರ ಸ್ವಾಮೀಜಿ ಸೇರಿದಂತೆ ಯಾದಗಿರಿ, ಗುರುಮಠಕಲ್, ದಿಗಾಂವಿ, ಸುಗೂರ (ಕೆ), ಇಂಡಿ, ಚಿಟಗುಪ್ಪಾ, ನಂದೂರ, ಗಾಣಗಾಪುರ ಮಠಗಳ ಪೂಜ್ಯರು ಸಾನಿಧ್ಯ ವಹಿಸುವರು.

ಉರೂಸ್ ನಿಮಿತ್ತ ಸಾಂಪ್ರದಾಯಿಕವಾಗಿ ಅ.1 ರಂದು ಮದ್ಯಾಹ್ನ 2:30ಕ್ಕೆ ಹೈದರಾಬಾದ ದಿಂದ ವಿಶೇಷ ರೈಲು ಮೂಲಕ ವಾಡಿ ಪಟ್ಟಣಕ್ಕೆ ಗಂಧ (ಸುಗಂಧ ದೃವ್ಯ) ಆಗಮಿಸುವುದು. 5:30ಕ್ಕೆ ವಾಡಿ ರೈಲು ನಿಲ್ದಾಣದಿಂದ ಹಳಕರ್ಟಿ ದರ್ಗಾ ವರೆಗೆ ಗಂಧ ಹೊತ್ತ ಭವ್ಯ ಸಂಧಲ್ ಮೆರವಣಿಗೆ ನಡೆಯಲಿದೆ. ಸಂಜೆ ಇಶಾ ನಮಾಜ್ ನಂತರ ಧರ್ಮ ಗುರುಗಳಿಂದ ಧರ್ಮೋಪದೇಶ ನಡೆಯಲಿದೆ. ಅ.2 ರಂದು ಬೆಳಗ್ಗೆ 5:30ಕ್ಕೆ ದರ್ಗಾ ಶರೀಫರ ಸಮಾದಿಗಳಿಗೆ ಗಂಧ ಲೇಪನ ಚಿರಾಗನ್ ಜರುಗುವುದು.

ಮದ್ಯಾಹ್ನ 2:30ಕ್ಕೆ ಉಪನ್ಯಾಸ ಕಾರ್ಯಕ್ರಮ. ಸಂಜೆ 9:00 ಗಂಟೆಗೆ ದೀಪೋತ್ಸವ ಹಾಗೂ ಖವ್ವಾಲಿ ಗಾಯನ. ಅ.3 ರಂದು ಮದ್ಯಾಹ್ನ 2:00ಕ್ಕೆ ಖಿದ್ಮತೇ ಜಿಹಾರತ್ ಮತ್ತು 5:30ಕ್ಕೆ ಖುರಾನ್ ಪಠಣ, 10:30 ರಿಂದ ಇಡೀ ರಾತ್ರಿ ಖವ್ವಾಲಿ ಗಾಯನ ಉತ್ಸವ ಜರುಗಲಿದ್ದು, ಬೆಳಗಿನ ಜಾವ 5:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವಿರಿಸಿದ ದರ್ಗಾ ಸಾಹೇಬ ಸೈಯದ್ ಅಬು ತುರಾಬ ಶಹಾ ಖ್ವಾದ್ರಿ, ಉರೂಸ್ ನಿಮಿತ್ತ ನೂರಾರು ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಆಸಕ್ತರು ಉರೂಸ್ ಸಮಿತಿಯನ್ನು ಸಂಪರ್ಕಿಸಬೇಕು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here