ಕಲ್ಯಾಣ ಭಾಗದ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ವಿ.ಮನೋಹರ

0
28

ಕಲಬುರಗಿ: ಕಲ್ಯಾಣ ಕರ್ನಾಟಕ ಸಂಪನ್ಮೂಲ ಭರಿತವಾದ ಪ್ರದೇಶವಾಗಿದೆ.ಇದು ಕಲೆ, ಸಾಹಿತ್ಯ ಶ್ರೀಮಂತದಿಂದ ಕೂಡಿದ್ದು, ಇಲ್ಲಿನ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ತಾವು ಪ್ರಯತ್ನಿಸುವುದಾಗಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ,ನಟ ವಿ.ಮನೋಹರ ಹೇಳಿದರು.

ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಿನಿಮಾ ಮತ್ತು ಬದುಕು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕಲಾವಿದರಿಗೆ ಯಾವುದೇ ಜಾತಿ, ಧರ್ಮ,ಭಾಷೆ,ರಾಜಕೀಯವಿಲ್ಲ.ಮಾನವ ಸೃಷ್ಟಿಸಿದ ಎಲ್ಲಾ ರೇಖೆಗಳನ್ನು ದಾಟಿ ಜನರ ಮನರಂಜಿಸುವುದಾಗಿದೆ.

Contact Your\'s Advertisement; 9902492681

ಅಂದಿನ ರಾಜಾ ಮಹಾರಾಜರು ಕಲೆಗೆ ಕೊಡುತ್ತಿದ್ದ ಗೌರವ ಬೆಲೆ ಕಟ್ಟಲು ಅಸಾಧ್ಯವಾಗಿತ್ತು.ಆದರೆ ಇಂದು ಕಲೆ, ಸಾಹಿತ್ಯವು ಹೊಟ್ಟೆ ಪಾಡಿಗಾಗಿ ಉಳಿದು ಅದು ನಿರ್ಲಕ್ಷ್ಯಕ್ಕೂ ಒಳಗಾಗಿದೆ.ಹೀಗಾಗಿ ನಿಜವಾದ ಕಲಾವಿದರು ಕೆಲಸವಿಲ್ಲದೆ ಖಾಲಿ ಕೂಡುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ತಾವು ಚಿತ್ರರಂಗದಲ್ಲಿ ಬೆಳೆದು ಬಂದ ದಾರಿ ಬಗ್ಗೆ ಮನ ಬಿಚ್ಚಿ ಮಾತನಾಡಿದರು.

ಕಲ್ಯಾಣ ಶರಣರ ನಾಡಾಗಿದ್ದು ಅನೇಕ ಮಹಾನ್ ಕಲಾವಿದರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ.ಪ್ರತಿಭೆಗಳನ್ನು ಗುರುತಿಸುವ ಕೆಲಸ ಆಗಬೇಕು.ತಾವು ಮುಂದೆ ಸಿನೆಮಾ ಮಾಡಿದರೆ ಇಲ್ಲಿಯ ಕಲಾವಿದರಿಗೆ ಅವಕಾಶ ಕೊಡುವ ಮೂಲಕ ಈ ಭಾಗದಲ್ಲಿ ಚಿತ್ರಿಕರಿಸುವುದಾಗಿ ಭರವಸೆ ನೀಡಿದರು.

ಕಲಾತ್ಮಕ ಚಿತ್ರ ನಿರ್ದೇಶಕ ಮಂಜು ಪಾಂಡವಪುರ ಅವರು ಮಾತನಾಡಿ ಅನೇಕ ವರ್ಷಗಳಿಂದ ತಮಗೂ ಕಲಬುರಗಿಗೆ ಅಗಾಧವಾದ ನಂಟಿದೆ.ಹೈದ್ರಾಬಾದ ಕರ್ನಾಟಕ ವಿಮೋಚನೆ ಕುರಿತು ಚಿತ್ರ ನಿರ್ದೇಶಿಸಲಾಗಿದೆ.ಶೀಘ್ರವೇ ಅದನ್ನು ತೆರೆ ಮೇಲೆ ಬರಲಿದೆ.ಅವಕಾಶ ಸಿಕ್ಕರೆ ಇನ್ನೂ ಹಲವು ಚಿತ್ರಗಳು ಈ ಭಾಗದಲ್ಲಿ ನಿರ್ದೇಶನ ಮಾಡುವುದಾಗಿ ತಿಳಿಸಿದರು.

ಅತಿಥಿಯಾಗಿ ಆಗಮಿಸಿದ್ದ ಸಾಹಿತಿ ಜಿ.ಜಿ.ವಣಿಕ್ಯಾಳ, ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಾಡಿದರು.ಕಲಾವಿದ ಅಶೋಕ ಕಾಳೆ,ಉಪಾಧ್ಯಕ್ಷ ವಿರೇಶ ದಂಡೋತಿ ವೇದಿಕೆಯಲ್ಲಿ ಇದ್ದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.

ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಸದಸ್ಯರಾದ ಬಸವರಾಜ ಅನ್ವರಕರ, ಬಂಡೆಪ್ಪ ಕೇಸೂರ, ಗುರುಪಾದಪ್ಪ ಕಾಂತಾ, ಸಿದ್ಧಲಿಂಗ ಗುಬ್ಬಿ, ಬಸವರಾಜ ಪುರ್ಮಾ, ಮನೋಹರ ಬಡಶೇಷಿ, ವೀರಪ್ಪ ಹುಡುಗಿ,ವಿನೋದ ಪಾಟೀಲ, ಮಲ್ಲಯ್ಯ ಸ್ವಾಮಿ ಬೀದಿಮನಿ, ಮಹಿಳಾ ಸದಸ್ಯೆಯರಾದ ಅನುರಾಧ ಕುಮಾರಸ್ವಾಮಿ, ಸುರೇಖಾ ಬಾಲಕೊಂದೆ, ಸುಷ್ಮಾ ಮಾಗಿ, ವಿಜಯಾ ದಂಡೋತಿ, ಶೈಲಜಾ ವಾಲಿ, ಶಕುಂತಲಾ ಮರಡಿ, ಲತಾ ತುಪ್ಪದ ಸೇರಿದಂತೆ ಬಡಾವಣೆಯ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here