ಸುರಪುರ: ನಗರದ ಎ.ಪಿ.ಎಂ.ಸಿ ಆವರಣದಲ್ಲಿ ಬರಗಾಲ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅನುಕೂಲವಾಗುವಂತೆ ತೆಗೆದಿರುವ ಗೋಶಾಲೆ ಹಾಗೂ ಮೇವಿನ ಬ್ಯಾಂಕ್ ಗೆ ನಿಕಟಪೂರ್ವ ಪಶು ಸಂಗೋಪನಾ ಆಯುಕ್ತರಾಗಿದ್ದ ಡಾ. ಸುರೇಶ ಹೊನ್ನಪ್ಪಗೋಳ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪನಿರ್ದೇಶಕರಾದ ಡಾ. ಶರಣಬೂಪಾಲರೆಡ್ಡಿ ಹಾಗೂ ಸಹಾಯಕ ನಿದೇಶಕರಾದ ಡಾ. ಸುರೇಶ ಹಚ್ಚಡ ಇವರಿಂದ ಪ್ರವಾಹ ಹಾಗೂ ಜಾನುವಾರುಗಳ ನಿರ್ವಹಣೆ, ಲಸಿಕೆ, ಆರೋಗ್ಯ ಕುರಿತ ವಿವರವಾದ ಮಾಹಿತಿ ಪಡೆದರು. ಕುರಿಗಳಲ್ಲಿ ಕಂಡು ಬರುವ ಮಿಶ್ರ ಸೊಂಕಿನ ಕುರಿತ ಮಾಹಿತಿ ಪಡೆದು ಸಂಬಂದ ಪಟ್ಟವರಿಗೆ ಕ್ರಮವಹಿಸುವಂತೆ ಸ್ಥಳದಲ್ಲಿಯೇ ಸೂಚಿಸಿದರು. ಪಶುಪಾಲನಾ ಇಲಾಖೆಯ ಕಾರ್ಯವೈಕರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಸಂಗೋಪನಾ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ. ಚನ್ನಪ್ಪಗೌಡ ಬಿರಾದಾರ ಉಪಸ್ಥಿತರಿದ್ದರು.