ಬ್ರಿಗೇಡ್ ಕಲಬುರಗಿಯತಂಡದ ವತಿಯಿಂದ ವೀರಾಕ್ಷತೆ ಸಂಗ್ರಹ

0
14

ಕಲಬುರಗಿ; ಯುವಾ ಬ್ರಿಗೇಡ್ ಕಲಬುರಗಿಯತಂಡದ ವತಿಯಿಂದ 2023 ಸ್ವಾತಂತ್ರ್ಯ ಶ್ರಾವಣವನ್ನು ವೀರಯೋಧರಜೊತೆ ಸಂಭ್ರಮವ£ Á್ನಚರಿಸುವ ಪ್ರಯುಕ್ತ ವೀರಾಕ್ಷತೆ ಸಂಗ್ರಹಿಸಲು ಆಳಂದ ತಾಲೂಕಿನಕೊತನ ಹಿಪ್ಪರಗಾಗ್ರಾಮಕ್ಕೆ ಭೇಟಿ ನೀಡಲಾಯಿತು.

ಈ ಗ್ರಾಮದ ವಿಶೇಷತೆಏನೆಂದರೆ 200 ಮನೆಗಳನ್ನು ಹೊಂದಿರುವಊರಾಗಿದ್ದು ಈ ಊರುದೇಶಕ್ಕೆ 60ಕ್ಕೂ ಹೆಚ್ಚು ಯೋಧರನ್ನು ನೀಡಿದೆ. ಕೆಲವೊಂದು ಕುಟುಂಬಗಳಲ್ಲಿ ಗಂಡ ಹೆಂಡತಿ, ಸ್ವಂತ ಸಹೋದರರು ಸೇವೆಯಲ್ಲಿರುವುದು ಕೇಳಿ ಹೆಮ್ಮೆಯೆನಿಸಿತು.

Contact Your\'s Advertisement; 9902492681

ಇಂತಹ ಮಹಾನ್‍ಯೋಧಗ್ರಾಮವು ಕಲಬುರಗಿಯ ಹೆಮ್ಮೆಯಾಗಿದ್ದು ಈ ಗ್ರಾಮಕ್ಕೆ ಭೇಟಿ ನೀಡಿದ್ದು ನಮ್ಮ ಸುದೈವವೇ ಹೌದು. ಈ ಗ್ರಾಮ ದಿಂದ ಸುಮಾರು 30 ಯೋಧ ಕುಟುಂಬಗಳಿಂದ ವೀರಾಕ್ಷತೆ ಸ್ವೀಕರಿ ಸಲಾಯಿತು.ಅಭಿಯಾನದುದ್ದಕ್ಕೂಗ್ರಾಮಸ್ಥರ ಸಹಕಾರ ನಮ್ಮ ಕೆಲಸವನ್ನು ಸಲೀಸಾಗಿಸಿತು. ಈ ಸಂದರ್ಭದಲ್ಲಿಗ್ರಾಮಸ್ಥರು ಹಾಗೂ ಮಾಜಿ ಸೈನಿಕರು ಭಾರತ ಮಾತೆಯಜಯಘೋಷದೊಂದಿಗೆಯುವ ಬ್ರಿಗೇಡ್‍ಜೊತೆಗೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿಯುವ ಬ್ರಿಗೇಡ್‍ತಂಡದ ಶಿವಲಿಂಗಪ್ಪಾ, ವೆಂಕಟೇಶ, ಶಾಂತಕುಮಾರ, ಅನೀಲ ತಂಬಾಕೆಜೊತೆಗೆ ಮಾಜಿ ಸೈನಿಕರಾದ ಸಿದ್ದಲಿಂಗ ಮಲಶೆಟ್ಟಿ, ಸೈನಿಕ್ ಸುನಿಲ್ ಹೀರೋಳಿ, ರೇಣುಕಾಚಾರ್ಯ ಸ್ಥಾವರಮಠ, ಸಿದ್ದರಾಜ ದುದಗೆ, ಸೂರ್ಯಕಾಂತ್ ಏಳಮೇಲಿ ಮತ್ತು ಗ್ರಾಂಪಂಚಾಯತ್ ಸದಸ್ಯರುಆದ ಶ್ರೀ ದಿಗಂಬರಕೊತನ್ ಹಿಪ್ಪರಗಿ ಅವರು ಜೊತೆಗೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here