ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಗೆ ಸಂಪರ್ಕಿಸುವದರೊಂದಿಗೆ ಸಲಹೆಗಳನ್ನು ಅನುಸರಿಸಿ ತಮ್ಮ ತಮ್ಮ ತೊಗರಿ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯ ವಿಜ್ಞಾನಿ ಡಾ. ಮಲ್ಲಪ್ಪ, ಅವರು ತಿಳಿಸಿದ್ದಾರೆ.
ತಾಲೂಕಿನ ವಿವಿಧ ಭಾಗಗಳಲ್ಲಿ ರೈತರು ಜಮೀನುಗಳಿಗೆ ಹೆಂಡಿ ಗೊಬ್ಬರ ಬಳಕೆ ಮಾಡಿದ್ದು ಅದರಲ್ಲಿ ಮೊದಲೇ ಹುಟ್ಟಿಕೊಂಡಿರುವ ಗೊಣ್ಣೆ ಹುಳುಗಳು ಸದ್ಯ ತಾಲೂಕಿನ ಕೆಲವುಕಡೆ ಮಳೆ ಅಭಾವದಿಂದ ತೊಗರಿ ಗಿಡಗಳ ಕಾಂಡವನ್ನು ಕತ್ತರಿಸಿ ತಿನ್ನುತ್ತಿರುವುದು ಕಂಡು ಬಂದಿದೆ. ಇದರಿಂದ ತೊಗರಿ ಗಿಡಗಳು ಒಣಗುವ ಸಾದ್ಯತೆಗಳು ಹೆಚ್ಚಾಗಿ ಇರುವುದರಿಂದ ಮತ್ತು ಈ ರೀತಿ ಗೊಣ್ಣೆ ಹುಳಿಗಳು ತೊಗರಿ ಬಡ್ಡಿಯ ಕಾಂಡದಲ್ಲಿ ಕಂಡು ಬಂದಲ್ಲಿ ತೊಗರಿ ಗಿಡಗಳ ಬಡ್ಡಿಗಳಿಗೆ ಕ್ಲೋರೊಪೈರಿಫಾಸ 50% ಇ.ಸಿ. 4 ಮಿ.ಲಿ ಪ್ರತಿ ಲೀಟರ ನೀರಿಗೆ ಬೆರೆಸಿ ಕಾಂಡಕ್ಕೆ ಸಿಂಪಡಿಸಬೇಕು ಅಥವಾ ಬ್ಯಾರಜೈಡ್ 2 ಮಿ.ಲಿ ಪ್ರತಿ ಲೀಟರ ನೀರಿಗೆ ಬೆರೆಸಿ ಕಾಂಡಕ್ಕೆ ಸಿಂಪಡಿಸಬೇಕು. ಇದರಿಂದ ಗೊಣ್ಣೆ ಹುಳುಗಳ ಭಾದೆಯನ್ನು ತಡೆಗಟ್ಟಬಹುದಾಗಿದೆ ಮತ್ತು ತೊಗರಿ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ನೇಟೆರೋಗದ ನಿರ್ವಹಣಾ ಕ್ರಮಗಳು: ತಾಲೂಕಿನ ಕೇಲವು ಭಾಗಗಳಲ್ಲಿ ಈಗಾಗಲೆ ಮಳೆ ಇಲ್ಲದಿರುವುದರಿಂದ ನೇಟೆರೋಗ ಕಾಣಿಸಿಕೊಂಡಿದ್ದು ಅಂತಹ ಬೆಳೆಗಳಿಗೆ ಸಾಫ (ಕಾರ್ಬಡೈಜಿಂ+ ಮ್ಯಾಂಕೋಜೇಬ) 2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಇದರಿಂದ ನೇಟೆರೋಗವನ್ನು ತಡೆಗಟ್ಟಲ್ಲೂ ಸಾದ್ಯವಾಗಲಿದ್ದು ತಾಲ್ಲೂಕಿನಲ್ಲಿ ಈಗಾಗಲೇ ಹೆಚ್ಚಾಗಿ ತೊಗರಿ ಬಿತ್ತನೆ ಮಾಡಿರುವುದರಿಂದ ತಾಲೂಕಿನ ರೈತರು ಬೆಳೆಗೆ ಸಂಭದಿಸಿ ರೋಗ ಭಾದೆ ಅಥವಾ ಯಾವುದೇ ಸಲಹೆ ಸೂಚನೆಗಳಿಗೆ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ ವಿಜ್ಞಾನಿಗಳನ್ನು ಸಂಪರ್ಕಿಸಬೇಕೆಂದು ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಪಿ. ವಾಸುದೇವ ನಾಯ್ಕ ರವರು ತಿಳಿಸಿದ್ದಾರೆ.
ಕೊಟನೂರು ಗ್ರಾಮದ ರೈತರು ಹಣ್ಣಮಂತ ತುರಾಯಿ ರವರ ಹೊಲದಲ್ಲಿ ಕಂಡು ಬಂದ ಗೊಣ್ಣೆ ಹುಳು ಭಾದೆ