ಕಲಬುರಗಿ; ಯುವಾ ಬ್ರಿಗೇಡ್ ಕಲಬುರಗಿಯತಂಡದ ವತಿಯಿಂದ 2023 ಸ್ವಾತಂತ್ರ್ಯ ಶ್ರಾವಣವನ್ನು ವೀರಯೋಧರಜೊತೆ ಸಂಭ್ರಮವ£ Á್ನಚರಿಸುವ ಪ್ರಯುಕ್ತ ವೀರಾಕ್ಷತೆ ಸಂಗ್ರಹಿಸಲು ಆಳಂದ ತಾಲೂಕಿನಕೊತನ ಹಿಪ್ಪರಗಾಗ್ರಾಮಕ್ಕೆ ಭೇಟಿ ನೀಡಲಾಯಿತು.
ಈ ಗ್ರಾಮದ ವಿಶೇಷತೆಏನೆಂದರೆ 200 ಮನೆಗಳನ್ನು ಹೊಂದಿರುವಊರಾಗಿದ್ದು ಈ ಊರುದೇಶಕ್ಕೆ 60ಕ್ಕೂ ಹೆಚ್ಚು ಯೋಧರನ್ನು ನೀಡಿದೆ. ಕೆಲವೊಂದು ಕುಟುಂಬಗಳಲ್ಲಿ ಗಂಡ ಹೆಂಡತಿ, ಸ್ವಂತ ಸಹೋದರರು ಸೇವೆಯಲ್ಲಿರುವುದು ಕೇಳಿ ಹೆಮ್ಮೆಯೆನಿಸಿತು.
ಇಂತಹ ಮಹಾನ್‍ಯೋಧಗ್ರಾಮವು ಕಲಬುರಗಿಯ ಹೆಮ್ಮೆಯಾಗಿದ್ದು ಈ ಗ್ರಾಮಕ್ಕೆ ಭೇಟಿ ನೀಡಿದ್ದು ನಮ್ಮ ಸುದೈವವೇ ಹೌದು. ಈ ಗ್ರಾಮ ದಿಂದ ಸುಮಾರು 30 ಯೋಧ ಕುಟುಂಬಗಳಿಂದ ವೀರಾಕ್ಷತೆ ಸ್ವೀಕರಿ ಸಲಾಯಿತು.ಅಭಿಯಾನದುದ್ದಕ್ಕೂಗ್ರಾಮಸ್ಥರ ಸಹಕಾರ ನಮ್ಮ ಕೆಲಸವನ್ನು ಸಲೀಸಾಗಿಸಿತು. ಈ ಸಂದರ್ಭದಲ್ಲಿಗ್ರಾಮಸ್ಥರು ಹಾಗೂ ಮಾಜಿ ಸೈನಿಕರು ಭಾರತ ಮಾತೆಯಜಯಘೋಷದೊಂದಿಗೆಯುವ ಬ್ರಿಗೇಡ್‍ಜೊತೆಗೆ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿಯುವ ಬ್ರಿಗೇಡ್‍ತಂಡದ ಶಿವಲಿಂಗಪ್ಪಾ, ವೆಂಕಟೇಶ, ಶಾಂತಕುಮಾರ, ಅನೀಲ ತಂಬಾಕೆಜೊತೆಗೆ ಮಾಜಿ ಸೈನಿಕರಾದ ಸಿದ್ದಲಿಂಗ ಮಲಶೆಟ್ಟಿ, ಸೈನಿಕ್ ಸುನಿಲ್ ಹೀರೋಳಿ, ರೇಣುಕಾಚಾರ್ಯ ಸ್ಥಾವರಮಠ, ಸಿದ್ದರಾಜ ದುದಗೆ, ಸೂರ್ಯಕಾಂತ್ ಏಳಮೇಲಿ ಮತ್ತು ಗ್ರಾಂಪಂಚಾಯತ್ ಸದಸ್ಯರುಆದ ಶ್ರೀ ದಿಗಂಬರಕೊತನ್ ಹಿಪ್ಪರಗಿ ಅವರು ಜೊತೆಗೆ ಇದ್ದರು.