ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳ ಮಾಡಲು ಸಂಸತ್ತಿನಲ್ಲಿ ಬಿಲ್ ಅಂಗೀಕರಿಸಿ

0
18

ರಾಯಚೂರು: ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ 17+7 ಮೀಸಲಾತಿಯನ್ನು 9 ಶೆಡ್ಯೂಲ್ ಗೆ ಸೇರಿಸಬೇಕು ಹಾಗೂ ಪರಿಶಿಷ್ಟ ಜಾತಿಯ ಶೇ 17 ರಷ್ಟು ಮೀಸಲಾತಿಗೆ ಸಂವಿಧಾನದ ಪರಿಚ್ಛೇದ 341(3) ಬಿಲ್ ಸಂಸತ್ತಿನ ಮುಂಗಾರು ಅಧಿವಶೇನದಲ್ಲಿ ಅಂಗೀಕರಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಪದಾಧಿಕಾರಿಗಳು ಧರಣಿ ನಡೆಸಿದರು.

ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಮಂಗಳವಾರ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಯ ಮೀಸಲಾತಿ ಶೇ 15ರಿಂದ ಶೇ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 3ರಿಂದ ಶೇ 7 ರಷ್ಟು ಹೆಚ್ಚಳ ಮಾಡಿ ರಾಜ್ಯದಲ್ಲಿ ಜಾರಿ ಮಾಡಲಾಗಿದೆ.ಆದರೆ ನಾಗಮೋಹನ್ ದಾಸ್ ಸಮಿತಿಯ ಒಳ ಮೀಸಲಾತಿ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ದೂರಿದರು.

ಮೀಸಲಾತಿ ಪ್ರಮಾಣವನ್ನು ಶೇ 50 ರಷ್ಟು ಹೆಚ್ಚಳ ಆಗಬಾರದು ಎಂದು ಸುಪ್ರಿಂ ಕೋರ್ಟ್ ನಿಯಮವಿದ್ದು ಮೀಸಲಾತಿ ತಿದ್ದುಪಡಿ ತರಲು ಶೆಡ್ಯೂಲ್ 9 ಗೆ ಸೇರಿಸಲು ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಕೂಡಲೇ ಸಂಸತ್ತಿನ ಅಧಿವೇಶನದಲ್ಲಿ ಬಿಲ್ ಮಂಡಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರು ಒಳ ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ಭರವಸೆಗಳು ಸುಳ್ಳಾಗಿದ್ದು, ಸಂಸತ್ತಿನ ಅಧಿವೇಶನದಲ್ಲಿ ಸಚಿವ ನಾರಾಯಣ ಸ್ವಾಮಿ ಅವರು ಒಳ ಮೀಸಲಾತಿ ಕುರಿತು ಕೇಳಿದ ಪ್ರಶ್ನೆಗೆ ಸಂವಿಧಾನದಲ್ಲಿ ಒಳ ಮೀಸಲಾತಿಗೆ ಅವಕಾಶವಿಲ್ಲ ಎಂದು ಗೊತ್ತಾಗಿದೆ. 2008ರಲ್ಲಿ ನ್ಯಾ. ಉಷಮೇಹರ ಅವರು 341(3)ಗೆ ತಿದ್ದುಪಡಿ ಅಗತ್ಯವಿದೆ. ಈ ಎರಡು ಬಿಲ್‍ಗಳನ್ನು ತಿದ್ದುಪಡಿಗಾಗಿ ಮಂಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ಮಾರಪ್ಪ ವಕೀಲ, ರಾಜ್ಯ ಸಂಚಾಲಕರಾದ ಶಿವರಾಯ ಅಕ್ಕರಕಿ, ಜೆ. ಬಿ ರಾಜು, ರಾಘವೇಂದ್ರ ಬೋರೆಡ್ಡಿ, ಹನುಮಂತಪ್ಪ ಮನ್ನಾಪೂರ, ಹೇಮರಾಜ ಅಸ್ಕಿಹಾಳ, ಹನುಮಂತ, ವಿ. ರಾಮು, ಹುಲಿಗೆಪ್ಪ, ಚಂದ್ರು, ಭಂಡಾರಿ, ಆಂಜನೇಯ, ಪ್ರಸಾದ್ ಭಂಡಾರಿ, ತಾಯಪ್ಪ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here